



ಕುಂದಾಪುರದಲ್ಲಿ ಸಿಪಿಐಎಂ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ

ಉಡುಪಿ : ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಮೇಲೆ ಶಿಸ್ತು ಕ್ರಮ, ವರ್ಗಾವಣೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ದಕ್ಷಿಣ ಕನ್ನಡ ಜಿಲ್ಲೆಯ ಗಡಿದಾಟಿ ಉಡುಪಿ ಜಿಲ್ಲೆಗೆ ವಿಸ್ತರಣೆಗೊಂಡಿದೆ.
ಕುಂದಾಪುರ ನಗರದಲ್ಲಿ ಸಿಪಿಐಎಂ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆದಿದೆ. ಅನುಪಮ್ ಅಗ್ರವಾಲ್ ರಂತಹ ಸರ್ವಾಧಿಕಾರಿಗಳಿಗೆ, ಜನವಿರೋಧಿ ಐಪಿಎಸ್ ಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ. ಹೋರಾಟ ಮತ್ತಷ್ಟು ವ್ಯಾಪಕಗೊಳ್ಳಲಿದೆ.
ಧರಣಿ, ಪ್ರತಿಭಟನೆ ಜನತೆಯ ಹಕ್ಕು. ಅದನ್ನು ಉಳಿಸಿಯೇ ಉಳಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಮುಖಂಡರು ಘಂಟಾಘೋಷವಾಗಿ ಸಾರಿದರು.







