

ಕಿಶೋರ್ ಕುಮಾರ್ ಪುತ್ತೂರು ಗೆಲುವು
ಮಂಗಳೂರು: ಕೋಟ ಶ್ರೀನಿವಾಸ ಪೂಜಾರಿ ಅವರ ಅವಧಿಪೂರ್ವ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಜಯಗಳಿಸಿದ್ದಾರೆ.
ಕಿಶೋರ್ ಅವರು 3,655 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ 1,958 ಮತ ಗಳಿಸಿದರು. ಎಸ್ಡಿಪಿಐನ ಅನ್ವರ್ ಸಾದತ್ 195 ಮತ, ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ 9 ಮತ ಗಳಿಸಿದರು. ಒಟ್ಟು 87 ಮತಗಳು ತಿರಸ್ಕೃತಗೊಂಡವು. ಚಲಾವಣೆಯಾದ ಒಟ್ಟು 5,907 ಮತಗಳ ಪೈಕಿ 5,819 ಸಿಂಧು ಮತಗಳಿದ್ದವು.



4




































