ಕಾವೇರಿದ ಬಿಜೆಪಿಯ ಪ್ರತಿಭಟನೆ : ಪೊಲೀಸರಿಂದ ಜಲಫಿರಂಗಿ

Picture of RB NEWS

RB NEWS

Bureau Report

ಕಾಸರಗೋಡು: ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜೀನಾಮೆ ನೀಡಬೇಕು ಮತ್ತು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಅಗತ್ಯ ವೈದ್ಯರುಗಳನ್ನು ನೇಮಿಸದಿರುವ ಆರೋಗ್ಯ ಇಲಾಖೆ ಧೋರಣೆ ಖಂಡಿಸಿ ಜನರಲ್ ಆಸ್ಪತ್ರೆಗೆ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನಾ ಮಾರ್ಚ್ ನಡೆಯಿತು.

ಪ್ರತಿಭಟನಾ ಕಾರ್ಯಕ್ರಮವನ್ನು ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ ವಿ. ಕೆ. ಸಜೀವನ್‌ ಉದ್ಘಾಟಿಸಿದರು.

ಕಾಸರಗೋಡಿನ ಆರೋಗ್ಯ ವಲಯವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆಯೆಂದು ಆರೋಪಿಸಿ ನಡೆದ ಮಾರ್ಚ್ ನಲ್ಲಿ ಪೋಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಲಘು ಘರ್ಷಣೆ ನಡೆದು ಪೋಲೀಸರು ಜಲಪಿರಂಗಿ ಪ್ರಯೋಗಿಸಿದರು.

ಘರ್ಷಣೆಯಲ್ಲಿ ಮಧೂರು ಪಂಚಾಯತಿನ ನಾಯಕ ಮಾಧವ ಮಾಸ್ತರ್ ಗಾಯಗೊಂಡರು.

ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು.

ಜಿಲ್ಲಾ ಕಾರ್ಯದರ್ಶಿ ಪಿ. ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ತ್, ಹಿರಿಯ ನಾಯಕರಾದ ಸವಿತಾ ಟೀಚ‌ರ್, ರಮೇಶ್‌ ಕೇಳುಗುಡ್ಡೆ. ವಿ.ರವೀಂದ್ರನ್, ಸತೀಶ್ಚಂದ್ಧಭಂಡಾರಿ, ಜಿಲ್ಲಾ-ಮಂಡಲ- ಪಂಚಾಯತ್ ಮಟ್ಟದ ಸಂಘಟನಾ ಕಾರ್ಯಕರ್ತರು ಮಾರ್ಚ್ ನಲ್ಲಿ ಪಾಲ್ಗೊಂಡರು.

ರಮೇಶ್ ಕೇಳುಗುಡ್ಡೆಯ ಹೆಸರನ್ನೇ ಕೇಳಿದೊಡನೆ ನೆನಪಿಗೆ ಬರುವುದೇ ಬೆಳ್ಳಾರೆ ಸಮೀಪದ ಪ್ರವೀಣ್ ನೆಟ್ಟಾರು ಕೊಲೆ‌ಯ ನಂತರದಲ್ಲಿ ನಡೆದ ಪ್ರತಿಭಟನೆ.

ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ನಾಯಕರುಗಳಾದ ನಳೀನ್ ಕುಮಾರ್ ಹಾಗೂ ಇತರ ಮುಖಂಡರು ಪ್ರಯಾಣ ಬೆಳೆಸಿದ ಕಾರು‌ ಅಲುಗಾಡಿತ್ತು. ಇದರ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿ ಇಡಲು ಪೊಲೀಸರು ಅಲ್ಲಲ್ಲಿ ಲಾಠಿಪ್ರಹಾರ ನಡೆಸಿದ್ದರು.

ಆ ಸಂದರ್ಭದಲ್ಲಿ ದೂರದಿಂದ ಘಟನೆಯನ್ನು ವೀಕ್ಷಿಸುತ್ತಿದ್ದ ರಮೇಶ್ ಕೇಳುಗುಡ್ಡೆಯ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರೂ ಘಟನಾ ಸ್ಥಳದಿಂದ ಕದಲದೇ ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿಚಾರ ಅಂದು ಸುದ್ದಿಗ್ರಾಸ್ತವಾಗಿತ್ತು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪೈಕಿ ಸತ್ಯಜಿತ್ ಸುರತ್ಕಲ್ ಹಾಗೂ ರಮೇಶ್ ಕೇಳುಗುಡ್ಡೆ ಗಮನಾರ್ಹವಾಗಿದೆ.

ಅಯೋಧ್ಯೆ ಕರಸೇವೆ ಸಹಿತ ಹಲವು ಹೋರಾಟಗಳಲ್ಲಿ ರಮೇಶ್ ಕೇಳುಗುಡ್ಡೆ ಭಾಗವಹಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top