ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಿಸಿದ ಉ.ಪ್ರ.ಚುನಾವಣೆ ಪ್ರಚಾರ ಸಭೆ; ರಾಹುಲ್, ಯಾದವ್ ಸಭೆಯಿಂದ ನಿರ್ಗಮನ

Picture of RB NEWS

RB NEWS

Bureau Report

ಪ್ರಯಾಗರಾಜ್ (ಉತ್ತರ ಪ್ರದೇಶ): ಪಕ್ಷದ ಕಾರ್ಯಕರ್ತರ ಗದ್ದಲ ಹಾಗೂ ಕಾಲ್ತುಳಿತದಂತಹ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಚುನಾವಣಾ ಸಭೆಯಲ್ಲಿ ಭಾಷಣ ಮಾಡದೆ ನಿರ್ಗಮಿಸಿದರು.

ಭಾನುವಾರ ಇಲ್ಲಿನ ಫುಲ್ಪುರ ಲೋಕಸಭಾ ಕ್ಷೇತ್ರದಿಂದ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿ

ಸಿರುವ ಅಮರನಾಥ್ ಮೌರ್ಯ ಪರವಾಗಿ ಜಂಟಿ ಚುನಾವಣಾ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ಅವರ ಬೆಂಬಲಿಗರು ಬ್ಯಾರಿಕೇಡ್‌ಗಳನ್ನು ಭೇದಿಸಿ ವೇದಿಕೆಯನ್ನು ತಲುಪಲು ಯತ್ನಿಸಿದರು. ಭಾರಿ ಜನಸಂದಣಿಯಿಂದ ಕಾಲ್ತುಳಿತದಂತಹ ಪರಿಸ್ಥಿತಿ ಏರ್ಪಟ್ಟಿತು. ಭದ್ರತಾ ದೃಷ್ಟಿಯಿಂದ ಉಭಯ ನಾಯಕರು ಅಲ್ಲಿಂದ ನಿರ್ಗಮಿಸಿದರು ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.

ಸಮಾವೇಶದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಮತ್ತು ಎಸ್‌ಪಿ ಬೆಂಬಲಿಗರು ಸ್ಥಳಕ್ಕೆ ಆಗಮಿಸಿದ್ದರು. ಯಾದವ್ ಸ್ಥಳಕ್ಕೆ ಬಂದೊಡನೆ ವೇದಿಕೆಯ ಮುಂದೆ ನಿಂತಿದ್ದ ಪ್ರೇಕ್ಷಕರು ಬ್ಯಾರಿಕೇಡ್‌ಗಳನ್ನು ಭೇದಿಸಿ, ವೇದಿಕೆಯನ್ನು ತಲುಪಲು ಯತ್ನಿಸಿದದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಸೃಷ್ಟಿಯಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಿಸಿದ ಉ.ಪ್ರ.ಚುನಾವಣೆ ಪ್ರಚಾರ ಸಭೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top