ನಮ್ಮ ಬೂತ್ ನಮ್ಮ ಹೆಮ್ಮೆ ಎಂಬ ಮಹತ್ತರವಾದ ಉದ್ದೇಶ ಇಟ್ಟು ಕೊಂಡು ಪ್ರತಿ ಬೂತ್ ನಲ್ಲಿ ಕೂಡಾ ಕಾರ್ಯಕರ್ತರು ಶ್ರಮ ಪಡುವ ಮೂಲಕ ಕಾಂಗ್ರೆಸ್ ನ್ನು ವಿಜಯದತ್ತ ಕೊಂಡೊಯ್ಯ ಬೇಕು ಎಂದು ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ .
ಕಾರ್ಕಳದಲ್ಲಿ ಹಿಂದುಳಿದ ವರ್ಗಗಳ ಸಭೆಯಲ್ಲಿ ಭಾಗವಹಿಸಿದ ಅವರು ಕಾಂಗ್ರೆಸ್ ಪಕ್ಷ ನಿರಂತರವಾಗಿ ಜನರ ಬದುಕು ಕಟ್ಟಲು ಪ್ರಯತ್ನ ಪಟ್ಟ
ಪಕ್ಷ. ಈ ಪಕ್ಷದ ಯೋಜನೆಗಳ ವಿಚಾರಗಳನ್ನು ಗ್ರಾಮೀಣ ಮಟ್ಟದಲ್ಲಿ ಕೊಂಡೊಯುವ ಕಾರ್ಯ ಆಗಬೇಕು.
ಕಾರ್ಕಳದಲ್ಲಿ ಪರಶುರಾಮರಿಗೆ ರಕ್ಷಣೆ ಇಲ್ಲ. ಪರಶುರಾಮರಿಗೆ ನ್ಯಾಯ ಕೊಡದ ಇವರು ಇನ್ನು ಜನರಿಗೆ ಯಾವ ರೀತಿಯಲ್ಲಿ ನ್ಯಾಯ ಕೊಡುತ್ತಾರೆ. ಪರಶು ರಾಮರ ಫೈಬರ್ ಮೂರ್ತಿ ಮಾಡಿ ಜನರಿಗೆ ಮೋಸ ಮಾಡುವ ಕಾರ್ಯ ಆಗುತ್ತಿದೆ. ಅಂತಹ ಮೋಸದ ಮನಸ್ಥಿತಿ ಬಿಜೆಪಿ ಶಾಸಕರದ್ದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ಮಾತನಾಡಿ ಸಿ ಇ ಟಿ ಮುಖಾಂತರ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೂ ಉತ್ತಮ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬಹಳಷ್ಟು ಜನರಿಗೆ ಸೇವೆ ನೀಡಿದೆ ಎಂದರು.
ಈ ಬಾರಿ ಪುನಃ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ತಿದ್ದುಪಡಿ ಮಾಡಿ ಹಿಂದುಳಿದ ವರ್ಗಕ್ಕೆ ನೀಡುವ ಎಲ್ಲಾ ಯೋಜನೆಗಳನ್ನು ರದ್ಧತಿ ಮಾಡುತ್ತಾರೆ. ಜನರು ಜಾಗ್ರತರಾಗಿರಬೇಕು ಎಂದು ಹೇಳಿದರು.
ನ್ಯಾಯವಾದಿ ಶೇಖರ್ ಮಡಿವಾಳ ಮಾತನಾಡಿ ಮಂಡಲ್ ವರದಿ ಮೂಲಕ ದೇಶದ ಜನರನ್ನು ಎತ್ತಿ ಕಟ್ಟಿ ಜನರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಜನರಿಗೆ ಬದುಕನ್ನು ನೀಡುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿದರೆ, ಬಿಜೆಪಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಜನರ ಮತ ಪಡೆದು ಜನರಿಗೆ ಅನ್ಯಾಯ ಮಾಡುತ್ತಿದೆ.
ಬದುಕು ಕಟ್ಟುವ ನಿಟ್ಟಿನಲ್ಲಿ ಬಿಜೆಪಿ ಹೇಳಿದ ಸುಳ್ಳುಗಳನ್ನು ತಿಳಿಯುವ ಪ್ರಯತ್ನವನ್ನು ಜನರು ಮಾಡಬೇಕು ಎಂದು ಹೇಳಿದರು.


























