ಕಾರ್ಮಿಕ ಸಂಘದ ಜೊತೆ ಜಂಟಿ ಸಭೆ : ಸಚಿವ ಸಂತೋಷ ಲಾಡ್ ವಾಗ್ದಾನ

Picture of RB NEWS

RB NEWS

Bureau Report

ಉಡುಪಿ : ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್, (ಸಿಐಟಿಯು) ನೇತೃತ್ವದಲ್ಲಿ ಕಾರ್ಮಿಕ ಮಂತ್ರಿಯಾದ ಸಂತೋಷ ಲಾಡ್ ಅವರನ್ನು ಭೇಟಿ ಯಾಗಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ,ತುಟ್ಟಭತ್ಯೆ ಹಾಗೂ ಇನ್ನಿತರ ಸಮಸ್ಯೆ ಕುರಿತು ಮನವಿ ನೀಡಿ ಚರ್ಚೆ ನಡೆಸಲಾಯಿತು‌.

ಬೀಡಿ ಕಾರ್ಮಿಕರ ಸಮಸ್ಯೆ ಕುರಿತು ಪ್ರತ್ಯೇಕ ಅಜೆಂಡಾ ಇಟ್ಟು ಕಾರ್ಮಿಕ ಸಂಘದ ಜೊತೆ ಜಂಟಿ ಸಭೆ ಮಾಡುವ ಕುರಿತು ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಮಾಜಿ ಸಚಿವ ವಿನಯ ಕುಮಾರ ಸೊರಕೆ, ಮುಖಂಡರುಗಳಾದ ಪ್ರಸಾದ್ ಕಾಂಚನ್ , ಎಮ್.ಎ.ಗಪೂರ್ ಜೊತೆಗೆ ಇದ್ದರು.

ನಿಯೋಗದಲ್ಲಿ ಬೀಡಿ ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕವಿರಾಜ್, ಎಸ್.ಕಾಂಚನ್, ನಳಿನಿ.ಎಸ್.ಕಂಟ್ರಾಕ್ಟರ್ ಯುನಿಯನ್ ಮುಖಂಡ ಕೃಷ್ಣ ರೈ, ರವಿಪೂಜಾರಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top