ಕಾರ್ಮಿಕ ವಿರೋಧಿ ನೀತಿ : ಜೆಸಿಟಿಯು ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ

Picture of RB NEWS

RB NEWS

Bureau Report

ಉಡುಪಿ : ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU)ಇಂದು ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ,ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿದಿ ದೇಶಾದ್ಯಂತ ಹರಾತಳ,ಜೈಲು ಭರೋ,ಮುಷ್ಕರ ಕ್ಕೆ ಕರೆ ನೀಡಿದ್ದು ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಉಡುಪಿ ಕೇಂದ್ರಗಳಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆದಿದೆ.ಉಡುಪಿಯಲ್ಲಿ JCTU ನೇತೃತ್ವದಲ್ಲಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಉಡುಪಿ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಂಚೆ ಅಧಿಕ್ಷಕರ ಮೂಲಕ ದೇಶದ ಪ್ರಧಾನ ಮಂತ್ರಿಯವರಿಗೆ ಕಾರ್ಮಿಕರ ಬೇಡಿಕೆಗಳ ಮನವಿಯನ್ನು ನೀಡಲಾಯಿತು.

ಸಭೆಯನ್ನು ಉದ್ದೇಶಿಸಿ ಪ್ರಧಾನ ವಾಗಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಾರ್ಮಿಕ ಕಾನೂನು ತಿದ್ದುಪಡಿಯಿಂದಾಹಿ ಕಾರ್ಮಿಕರಿಗೆ ಆಗುವ ಸಮಸ್ಯೆಗಳ ,ಅನ್ಯಾಯದ ವಿರುದ್ಧವಾಗಿದೆ ಎಂದರು.

ಪ್ರತಿಭಟನೆ ಸಭೆಯಲ್ಲಿ JCTU ನ ಭಾಗವಾಗಿ ಇರುವಂತಹ ಎಐಟಿಯುಸಿ ಸಂಘದ ಉಡುಪಿ ಜಿಲ್ಲಾ ಮುಖಂಡರಾದ ಯು.ಶಿವನಂದ,ಶಶಿಕಲಾ,ಐ ಎನ್ ಟಿ ಯು ಸಿ ಸಂಘಟನೆಯ ಉಡುಪಿ ಜಿಲ್ಲಾ ಮುಖಂಡರಾದ ಕಿರಣ್ ಹೆಗ್ಡೆ,ಶಿವರಾಮ್,ಪ್ರದೀಪ್, ಆರ್ ಎಂ ಎಸ್ (ಅಂಚೆ) ಯೂನಿಯನ್ ಉಡುಪಿ ಮುಖಂಡರಾದ ದಾಮೋದರ ಭಟ್ , ಎಐಬಿಇಎ ಸಂಘಟನೆಯ ಉಡುಪಿ ಜಿಲ್ಲಾ ಮುಖಂಡರಾದ ನಾಗೇಶ್ ನಾಯಕ್ ಮತ್ತು ರಮೇಶ್, ವಿಮಾ ನೌಕರರ ಸಂಘದ ಮುಖಂಡರಾದ ಕೆ.ವಿಶ್ವನಾಥ, ಪ್ರಭಾಕರ್,ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷೆ ಭಾರತಿ.ಎಸ್,ಕಾರ್ಯದರ್ಶಿ ಸುಶೀಲಾ ನಾಡ,ಕೋಶಾಧಿಕಾರಿ ಯಶೋಧ,ಮುಖಂಡರಾದ ಜಯಲಕ್ಷ್ಮಿ, ಪ್ರಮೀಳಾ, ಪುಷ್ಪ,ಆಶಾ ಕುಂದಾಪುರ,ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷರಾದ ಶೇಖರ್ ಬಂಗೇರ,ದಯಾನಂದ ಕೋಟ್ಯಾನ್, ಸುಭಾಸ್ ನಾಯಕ್,ಗಣೇಶ ನಾಯಕ್, ರಮೇಶ್ಉಡುಪಿ ,ಸೈಯಾದ್ ಅಲಿ,ರಾಮ ಕಾರ್ಕಡ,ರಮೇಶ್ ಬ್ರಹ್ಮಾವರ,ಮುರಳಿ,ವಾಮನ ಪೂಜಾರಿ,ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕಾರದ ಸಂಜೀವ ಬಳ್ಕೂರು,ಅಟೋ ಯೂನಿಯನ್ ಮುಖಂಡರಾದ ಸದಾಶಿವ ಪೂಜಾರಿ ಬ್ರಹ್ಮವಾರ,ಕಾರ್ಕಳ ತಾಲೂಕು ಸಿಐಟಿಯು ಮುಖಂಡರಾದ ಸುನೀತಾ ಶೆಟ್ಟಿ, ನಾಗೇಶ್,ಶೇಖರ್ ಕುಲಾಲ್,ಕಾರ್ಕಳದ ನಿಟ್ಟೆ ಲೆಮಿನಾ ಯೂನಿಯನ್ ಅಧ್ಯಕ್ಷ ರಾದ ಮೋಹನ್ ಚಂದ್ರ,ಕಾರ್ಯದರ್ಶಿ ನಾಗೇಶ್,ಉಡುಪಿ ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ಅಧ್ಯಕ್ಷ ರಾದ ನಳಿನಿ.ಎಸ್,ಕಾರ್ಯದರ್ಶಿ ಉಮೇಶ್ ಕುಂದರ್, ಸಿಐಟಿಯು ಉಡುಪಿ ವಲಯ ಮುಖಂಡರಾದ ಮೋಹನ್, ಸರೋಜ.ಎಸ್, ರಂಗನಾಥ,ಸಂಜೀವ ಪೂಜಾರಿ ಲಕ್ಷಣ ಶೆಟ್ಟಿ, ಉಪಸ್ಥಿತರಿದ್ದರು.
JCTU ಉಡುಪಿ ಜಿಲ್ಲಾ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಪ್ರಸ್ತಾವಿಕವಾಗಿ ಮಾತಾನಾಡಿ ಸ್ವಾಗತ ಮಾಡಿದರು,ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಧನ್ಯವಾದ ನೀಡಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top