ಕಾರ್ಕಳ ಹಾಗೂ ಕಲ್ಯಾಣಪುರ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸ್ವಾತಂತ್ರ್ಯೋತ್ಸವ
“ದೇಶವೇ ಮೊದಲು, ಪರಂಪರೆಯ ಅರಿವು ನಮಗಿರಲಿ
– ಪ್ರೊಫೆಸರ್ ಚಂದ್ರಪ್ರಭಾ ಹೆಗ್ಡೆ.
ಕಲ್ಯಾಣಪುರ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ, ಇಲ್ಲಿ 78ನೇಯ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸ್ರೂರು ಶಾರದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಚಂದ್ರಪ್ರಭಾ ಹೆಗ್ಡೆ ಇವರು ಧ್ವಜಾರೋಹಣ ಗೈದರು.
ದೇಶ ಸೇವೆಯೇ ಈಶ ಸೇವೆ, ಭಾಷಾ ಎಚ್ಚರಿಕೆ, ಗುರು ಶಿಷ್ಯ ಪರಂಪರೆ- ಸಂಬಂಧ ಮಾತೃದೇವೋಭವ ಇದರ ಚರಿತಾರ್ಥ, ಜೀವನ ಮೌಲ್ಯಗಳ ಅಳವಡಿಕೆ, ಮೊದಲಾದ ವಿಚಾರಗಳನ್ನು ಉಲ್ಲೇಖಿಸಿದರು.
ಭಗವದ್ಗೀತೆಯಮೇರುವಾಕ್ಯ “ಸ್ವಧರ್ಮೇ ನಿಧನಂ ಶ್ರೇಯ:” ಇದನ್ನು ಚೆನ್ನಾಗಿ ವ್ಯಾಖ್ಯಾನಿಸಿದರು. ವೇದಮಾತೆಯ ರಕ್ಷಣೆ, ಭೂಮಾತೆಯ ರಕ್ಷಣೆಗಳನ್ನು ಮಾಡುತ್ತಾ ನಮ್ಮಲ್ಲಿ ಅಡಗಿರುವ ಅಂತರ್ ಶಕ್ತಿಯ ಉದ್ದೀಪನ ಆಗಬೇಕಾಗಿದೆ. ಅಂತರಂಗ ಶಕ್ತಿಯನ್ನು ಜಾಗೃತಗೊಳಿಸಿ, ಶೋಧಿಸಿ, ಸಾಧಿಸಿ ಪೋಷಿಸಬೇಕು. ದೇಶಕ್ಕಾಗಿ ನಾನಾಗಬೇಕೇ ಹೊರತು ನನಗಾಗಿ ದೇಶ ಅಲ್ಲ. ಕನಿಷ್ಠ ಅವಧಿಯಲ್ಲಿ ಗರಿಷ್ಠ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿ ವೃಂದವನ್ನು ಹುರಿದಿಂಬಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ.ಬಿ ಗಣನಾಥ ಶೆಟ್ಟಿ ಹಾಗೂ ವಿಮಲ್ ರಾಜ್ ಉಪಸ್ಥಿತರಿದ್ದರು.
ತ್ರಿಶಾ ಫೌಂಡೇಶನ್ ಅಧ್ಯಕ್ಷ ಪ್ರಭಾಕರ್ ಭಂಡಾರಿ, ಕಾರ್ಯದರ್ಶಿ ಸರಿತಾ ಭಂಡಾರಿ ಹಾಗೂ ಟ್ರಸ್ಟಿ ಕಾರ್ತಿಕ್ ಭಂಡಾರಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ಯವರು ಆಗಮಿಸಿದ ಅತಿಥಿ ಅಭ್ಯಾಗತರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ವಿದ್ಯಾಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಪೃಥ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು.
ಧ್ವಜಾರೋಹಣ ಕಾರ್ಯಕ್ರಮದ ನಂತರ ಕ್ರಿಯೇಟಿವ್ ಸವಿಗಾನ ಶೀರ್ಷಿಕೆಯ ಅಡಿಯಲ್ಲಿ “ಮಾಸ್ಟರ್ ಡ್ರಾಮ ಆರ್ಟ್ಸ್” ಉಡುಪಿ, ಇವರಿಂದ ಸುಂದರ ದೇಶಭಕ್ತಿ ಮತ್ತು ಸದಭಿರುಚಿಯ ಗೀತ ಗಾಯನ ಕಾರ್ಯಕ್ರಮ ನೆರವೇರಲ್ಪಟ್ಟಿತು.
ರಾಷ್ಟ್ರಧ್ವಜ ಹಾರುತ್ತಿರುವುದು ನಮ್ಮ ಸೈನಿಕರ ಉಸಿರಿನಿಂದ
: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಕಾರ್ಕಳ : ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮತ್ತು ವಿರೋಧ ಪಕ್ಷದ
ಮುಖ್ಯ ಮಾಜಿ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಕಾರ್ಕಳದ
ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ
ಸ್ವಾತಂತ್ರ್ಯದಿನಾಚರಣೆಯ
ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಸ್ವಾತಂತ್ರ್ಯದ ಕನಸುಗಾರರು ಸ್ವಾತಂತ್ರ್ಯವ ನಮಗೆ ಧಾರೆಯನೆರೆದರು.
ಅದನ್ನು ನಾವು ಉಳಿಸೋಣ.ಉಳಿಸಿ ಮುಂದಕ್ಕೆ ಬೆಳೆಸೋಣ ಎಂಬ
ಸಂದೇಶವನ್ನು ನೀಡಿದರು.ದೇಶಕ್ಕಾಗಿ ಬದುಕುವ ಮೂಲಕ
ನಮ್ಮ ಸೈನಿಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು
ಗೌರವಿಸಬೇಕು.
ನಮ್ಮ ದೇಶವನ್ನು ನಮ್ಮ ತಾಯಿ ಎಂದು ಗೌರವಿಸಿ ಎಂಬ ವಿಶೇಷ ಸಂದೇಶದೊಂದಿಗೆ
ಅವರು ಈ ದಿನದ ಮಹತ್ವದ ಕುರಿತು ಭಾಷಣ ಮಾಡಿದರು.
ಧ್ವಜಾರೋಹಣದ ಬಳಿಕ ಮಜಾ ಟಾಕೀಸ್ ನ ಮೋಹನ್ ಕಾರ್ಕಳ ಮತ್ತು ತಂಡದವರಿಂದ
” ಕ್ರಿಯೇಟಿವ್ ಸವಿಗಾನ ” ಎಂಬ ಶೀರ್ಷಿಕೆಯಡಿ ದೇಶಭಕ್ತಿ ಗೀತೆ ಮತ್ತು ಸದಭಿರುಚಿಯ ಗೀತಗಾಯನ
ಕಾರ್ಯಕ್ರಮ ‘ ಸಪ್ತಸ್ವರ ‘ ವೇದಿಕೆಯಲ್ಲಿ ಜರುಗಿತು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿ ಅಭ್ಯಾಗತರೆಲ್ಲರನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವತಿಯಿಂದ
ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ,
ಪ್ರಾಂಶುಪಾಲರು, ಬೋಧಕ – ಬೋಧಕೇತರ ವೃಂದದವರು,
ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥ ರಾಜೇಶ್ ಶೆಟ್ಟಿ ಹಾಗೂ ಜೀವಶಾಸ್ತ್ರ
ವಿಭಾಗ ಮುಖ್ಯಸ್ಥ ಲೋಹಿತ್ ಎಸ್ ಕೆ ರವರು
ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು.





































