ಕಾರ್ಕಳ ಸಾಹಿತ್ಯ ಸಂಘ
ನಿರಂಜನ ೧೦೦ ವಿಶೇಷ ಉಪನ್ಯಾಸ
ಕಾರ್ಕಳ : ಈ ನಾಡು ಕಂಡ ಶ್ರೇಷ್ಠ , ಅಂಕಣಕಾರ , ವಿಮರ್ಶಕ ನಿರಂಜನ ಅವರ 100ನೆ ವರ್ಷಾಚರಣೆಯ ಸಂದರ್ಭದಲ್ಲಿ ಕಾರ್ಕಳ ಸಾಹಿತ್ಯ ಸಂಘ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಕಳದ ಹೋಟೇಲ್ ಪ್ರಕಾಶ ದ ಸಂಭ್ರಮ ಸಭಾಂಗಣದಲ್ಲಿ ನಿರಂಜನ 100 ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ ಧನಂಜಯ ಕುಂಬ್ಳೆ ವಿಶೇಷ ಉಪನ್ಯಾಸ ನೀಡಿ, ಬಾಲ್ಯ ಸಾಹಿತ್ತಿಕ ಚಟುವಟಿಕೆಗಳು ಬಗ್ಗೆ ವಿವರಿಸುತ್ತಾ ಅವರ ವೈವಿಧ್ಯಪೂರ್ಣ ಬದುಕಿನ ಕುರಿತು ಹಾಗೂ ಜಾತ್ಯಾತೀತವಾದ ಸಮಾಜ ನಿರ್ಮಾಣದ ಬಗ್ಗೆ
ಅವರ ಕನಸುಗಳು, ಭಾರತವನ್ನು ಜಗತ್ತಿನಲ್ಲಿಯೇ ಅತ್ಯುತ್ತಮ ರಾಷ್ಟ್ರವನ್ನಾಗಿಸುವ ತಮ್ಮ
ಅನಿಸಿಕೆಗಳನ್ನು ಪ್ರಸ್ತುತಪಡಿಸಿದರು.
ಗೌರವಾಧ್ಯಕ್ಷ ಆರ್ ತುಕಾರಾಮ ನಾಯಕ್ ಅವರು ಅತಿಥಿಗಳನ್ನು ಸ್ಮರಣಿಕೆಗಳೊಂದಿಗೆ ಗೌರವಿಸಿದರು.
ಕಾರ್ಯಾಧ್ಯಕ್ಷ ಕೆ.ಪಿ. ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು
ಕಾರ್ಯದರ್ಶಿ ಬಿ.ಕೆ. ಈಶ್ವರಮಂಗಲ ವಂದಿಸಿದರು. ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ ಪ್ರಧಾನ ಕಾರ್ಯದರ್ಶಿ ಬಿ ಪದ್ಮನಾಭ ಗೌಡ ವೇದಿಕೆಯಲ್ಲಿದ್ದರು.
ಶೈಲಜಾ ಹೆಗ್ಡೆ ನಿರೂಪಿಸಿದರು. ವೈ ಅನಂತ ಪದ್ಮನಾಭ ಭಟ್ ಸಹಕರಿಸಿದರು.

































