ಕಾರ್ಕಳ : ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ :ಆಮಂತ್ರಣ ಪತ್ರಿಕೆ ಬಿಡುಗಡೆ
ಕಾರ್ಕಳ : ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಜೀರ್ಣೋದ್ದಾರ, ಅಷ್ಟಬಂಧ ಬ್ರಹ್ಮಕಲಶೋತ್ಸವವೂ ಏಪ್ರಿಲ್ 23ರಿಂದ ಮೇ 4 ರವರೆಗೆ ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆ ಹಾಗೂ ವಾಹನದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ಮುಂಬಯಿ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಮುದೆಲಾಡಿ ಮನೆ ಸಾಣೂರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಪ್ರತಿಯೊಂದು ಮನೆಯಿಂದಲೂ ಪ್ರತಿಯೊಬ್ಬರು ಭಾಗವಹಿಸಿ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀರಾಮ ಭಟ್, ಜೀರ್ಣೋದ್ಧಾರ ಮತ್ತು ಬ್ರಹ್ಮಕಲೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾತ್ ನಾಯ್ಕ್ ಸಾಣೂರು ಗುತ್ತು, ಮುಂಬಯಿ ಸಮಿತಿಯ ಪ್ರಧಾನ ಸಂಚಾಲಕ ವಿದ್ಯಾಧರ್ ಕರ್ಕೇರ ಕಡೆಬೆಟ್ಟು ಗುತ್ತು, ವಿಜಯ ಶೆಟ್ಟಿ ಪೊರ್ಲೊಟ್ಟು ಗುತ್ತು, ಸಂಘಟನಾ ಕಾರ್ಯದರ್ಶಿರಾದ ಜಗದೀಶ್ ಪೂಜಾರಿ ಸಾಣೂರು, ನರಸಿಂಹ ಭಟ್, ಸ್ವಾಗತ ಸಮಿತಿ ಸಂಚಾಲಕ ಯುವರಾಜ್ ಬಲಿಪ, ಜೀರ್ಣೋದ್ದಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಯುವರಾಜ್ ಜೈನ್ ವಿವಿಧ ಸಮಿತಿಯ ಸಂಚಾಲಕರಾದ ವಿಶ್ವನಾಥ್ ಶೆಟ್ಟಿ ಭಾಮಿನಿ ಏರ್ನಡ್ಕ ಗುತ್ತು, ದೇವಾನಂದ್ ಶೆಟ್ಟಿ ಪ್ರವೀಣ್ ಕೋಟ್ಯಾನ್ ಶಂಕರ್ ಶೆಟ್ಟಿ, ಕೊರಗ ಶೆಟ್ಟಿ ಪದ್ಮನಾಭ ಶೆಟ್ಟಿ, ಪ್ರವೀಣ್ ಶೆಟ್ಟಿ ಸತೀಶ್ ಮಠದಕೆರೆ ಸದಾಶಿವ ಶೆಟ್ಟಿ ಸುನೀಲ್ ಶೆಟ್ಟಿ ಮಹೇಶ್ ಶೆಟ್ಟಿ ಸಾಧು ನಾಯ್ಕ್ ಕರುಣಾಕರ್ ಶೆಟ್ಟಿ ಮಾಧವ ಭಂಡಾರ್ಕರ್ ಶೇಖರ್ ಶೆಟ್ಟಿ, ಮಂಜೇಶ್ ಶೆಟ್ಟಿ, ಅಖಿಲೇಶ್, ಭಾಸ್ಕರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕ ಮೋಹನ್ ಶೆಟ್ಟಿ ಸಾಣೂರು ನಿರೂಪಿಸಿದರು





































