ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜು: ಎನ್ಎಸ್ಎಸ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ

Picture of RB NEWS

RB NEWS

Bureau Report

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜು:
ಎನ್ಎಸ್ಎಸ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ

ಕಾರ್ಕಳ: ಗಾಂಧೀಜಿಯವರು ಕಂಡ ಕನಸು ರಾಮ ರಾಜ್ಯ. ನನಸು ಮಾಡುವುದು ಯುವ ಜನತೆಯ ಜವಾಬ್ದಾರಿ. ಗಾಂಧೀಜಿಯವರು ‘ ಸತ್ಯಮೇವ ಜಯತೆ ‘ ಎಂಬ ತತ್ವದಂತೆ ಬಾಳಿದವರು, ಮಹಾನ್ ಸಾಧನೆಗೈದ ಮಹಾತ್ಮರು. ಅವರ ದೇಶಭಕ್ತಿ ನಮಗೆಲ್ಲ ಮಾದರಿ ಎಂದು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ನಡೆದ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮ ಸಂದರ್ಭದಲ್ಲಿ ಮುಖ್ಯ ಅತಿಥಿ ಶಿವ ಅದ್ವೆರ್ಟೈಸೆರ್ಸ್ ಮಾಲಕ ಆರ್ ವರದರಾಯ ಪ್ರಭು ಅವರು ಹೇಳಿದರು.

ಯುವ ಜನತೆ ದೇಶ ಭಕ್ತರಾಗಿ, ದುಶ್ಚಟಗಳಿಂದ ದೂರವಿರಿ, ಆಂತರಿಕ ಸ್ವಚ್ಛತೆಯು ಬಹಳ ಮುಖ್ಯ. ಇದರಿಂದ ಆಂತರಿಕ ಶಕ್ತಿ ಹೆಚ್ಚುತ್ತದೆ. ಸಕಾರಾತ್ಮಕ ಚಿಂತನೆ ಬರುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಸಂದೇಶ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ. ಉಷಾನಾಯಕ್ ಮಾತನಾಡುತ್ತಾ, ನಾವಿಂದು ನಡೆಸುತ್ತಿರುವ ನೆಮ್ಮದಿಯ ಜೀವನ ಹಲವು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಫಲ. ಭಾರತೀಯರಾಗಿ ಹುಟ್ಟಿದ ನಮ್ಮ ಜೀವನವನ್ನು ದೇಶ ಸೇವೆ ಮಾಡಿ ಸಾರ್ಥಕಗೊಳಿಸಬೇಕು. ಗಾಂಧೀಜಿಯವರು ಅಹಿಂಸಾ ತತ್ವದ ಪಾಲಕರು. ಅವರ ಆತ್ಮ ಚರಿತ್ರೆ ‘ ನನ್ನ ಸತ್ಯಾನ್ವೇಷಣೆ ‘ ಯನ್ನು ಓದಬೇಕು. ಹಿಂಸೆಯಿಂದ ದೂರವಿರಬೇಕು ಎಂದು ಹೇಳಿದರು.

ದೈಹಿಕ ಶಿಕ್ಷಕಿ ಪ್ರಭಾವತಿ ಶೆಟ್ಟಿ ಹಾಗೂ ಎನ್ಎಸ್ಎಸ್ ಘಟಕದ ನಾಯಕಿಯರಾದ ಅನನ್ಯ, ಅಮೂಲ್ಯ, ನಯನ ಹಾಗೂ ಲಾವಣ್ಯ ಉಪಸ್ಥಿತರಿದ್ದರು.

ಎನ್ಎಸ್ಎಸ್ ಯೋಜನಾಧಿಕಾರಿ ಅನ್ವಿತಾ ಮಲ್ಯ ಅತಿಥಿಗಳ ಪರಿಚಯ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಚೈತ್ರ ವಂದಿಸಿದರು. ಸೌಜನ್ಯ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top