ಕಾರ್ಕಳ ಶ್ರೀರಾಮ ಸಭಾಭವನದಲ್ಲಿ ಶ್ರೀರಾಮ ನವಮಿ
ದೇವಿ ದರ್ಶನ ಪಾತ್ರಿ ದೇವಣ್ಣ ಶೇರ್ವೆಗಾರ್ ಅವರಿಗೆ ಸನ್ಮಾನ

ಧಾರ್ಮಿಕ ಸಭೆಯಲ್ಲಿ ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ತನ್ನ ತಂದೆಯವರಿಂದಲೇ ಪಾರಂಪರಿಕವಾಗಿ ಬಂದಿರುವ ಹಲವು ದಶಕಗಳಿಂದ ದೇವಿ ದರ್ಶನ ದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಕೇಚಿಲ ಮನೆತನದ ದೇವಣ್ಣ ಶೇರ್ವೆಗಾರ್ ಅವರನ್ನು ರಾಮಕ್ಷತ್ರಿಯ ಸಂಘದ ವತಿಯಿಂದ ಸಮ್ಮಾನಿಸಲಾಯಿತು.








ಸಭೆಯ ಅಧ್ಯಕ್ಷತೆಯನ್ನು ಕಾರ್ಕಳ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ವಹಿಸಿ ಮಾತನಾಡಿ, ರಾಮಕ್ಷತ್ರಿಯ ಸಮಾಜಬಾಂಧವರು ನಮ್ಮ ತಲೆತಲಾಂತರಗಳಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಿ ಯುವ ಸಮುದಾಯಕ್ಕೆ ಪ್ರೇರಣೆ ನೀಡಬೇಕು. ಇಳಿ ವಯಸ್ಸಿನಲ್ಲಿಯೂ ದೇವಿ ದರ್ಶನ ಪಾತ್ರಿಯಾಗಿ ದೇವಣ್ಣ ಶೇರ್ವೆಗಾರ್ ರವರು ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ. ಸಂಘದ ವತಿಯಿಂದ ನಡೆಸಲ್ಪಡುವ ಕಾರ್ಯಕ್ರಮವು ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಎಂದು ಹೇಳುತ್ತಾ, ಶ್ರೀರಾಮ ನವಮಿಯ ಕುರಿತು ಉಪನ್ಯಾಸವನ್ನು ನೀಡಿ ಶ್ರೀರಾಮನ ಅನುಗ್ರಹ ಎಂದೆಂದಿಗೂ ಇರಲಿ, ಶ್ರೀರಾಮನ ಅದರ್ಶಗಳು ನಮಗೆಲ್ಲಾ ಮಾರ್ಗದರ್ಶನವಾಗಲಿ ಎಂದರು.
ಕಾರ್ಯಕ್ರಮದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಚಂದ್ರಕಾಂತ್.ಪಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಜಗನ್ನಾಥ್ ಜೋಡುರಸ್ತೆ, ಮಂಗಳೂರು ಡೆಕ್ಕನ್ ಹೆರಾಲ್ಡ್ ಮಾಧ್ಯಮದ ಉದ್ಯೋಗಿ ಕೆ.ಬಿ.ಗುರುಪ್ರಸಾದ್ ರಾವ್ ಹಿರಿಯಂಗಡಿ ಹಾಗೂ ಕಾರ್ಕಳ ರಾಮಕ್ಷತ್ರಿಯ ಸಂಘದ ಉಪಾಧ್ಯಕ್ಷರಾದ ಅಂಬಾಪ್ರಸಾದ್.ಪಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಾನಿಗಳಾದ ಕಾರ್ಕಳದ ಚಂದ್ರಕಲಾ ದುಬೈ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ದೀಪಕ್ ರಾವ್, ಹಿರಿಯ ಅಧಿಕಾರಿ ಕೋಟಕ್ ಮಹೇಂದ್ರ ಸಂಸ್ಥೆ, ಮುಂಬೈ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಿಕ್ಷಕ ಸಂಜಯ್ ಕುಮಾರ್ ಅಭಿನಂದನಾ ಭಾಷಣ ಮಾಡಿದರು. ಸುರೇಖಾ ರಾವ್ ಸನ್ಮಾನ ಪತ್ರ ವಾಚಿಸಿದರು. ಸ್ಮೃತಿ ಸ್ವಾಗತಿಸಿದರು. ಸ್ವರ್ಣ ವಂದಿಸಿದರು. ಬಿ. ಮನಮೋಹನ ರಾವ್ ನಿರೂಪಿಸಿದರು.
ರಾಮಕ್ಷತ್ರಿಯ ಮಹಿಳಾ ಭಜನಾ ತಂಡದಿಂದ ಭಜನಾ ಸಂಕೀರ್ತನೆ ಜರುಗಿತು. ಅನ್ನಸಂತರ್ಪಣೆ ನಡೆಯಿತು.






































