ಕಾರ್ಕಳ : ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು, ಕಾರ್ಕಳ, ಹೆಬ್ರಿ ತಾಲೂಕು ಸಮಿತಿ, ಕಾರ್ಕಳ ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ, ಕಾರ್ಕಳ ಹಾಗೂ ಯುವ ಬಂಟರ ಸಂಘ, ಕಾರ್ಕಳ ಇವರ ಸಹಯೋಗದಲ್ಲಿ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ಕೆಸರಕೂಟವು ಆಗಸ್ಟ್ 11ರಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿರುವುದು.
ಉದ್ಘಾಟನೆ ಮತ್ತು ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ,ಸನ್ಮಾನ, ಕ್ರೀಡೆಗಳು ಮತ್ತು ವಿದ್ಯಾರ್ಥಿ ವೇತನ ನೀಡಲಾಗುವುದು. ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಸೀಮಿತವಾಗಿದೆ.
ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಎಲ್ಲಾ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಹಾಜರಿರಬೇಕಾಗಿದೆ.
ಹೊರಾಂಗಣ ಕ್ರೀಡೆಗಳು ಸಮಯ : ಬೆಳಿಗ್ಗೆ 9-00ರಿಂದ
ಪುರುಷರು ವಯಸ್ಸಿನ ಮಿತಿ ಇಲ್ಲದೆ ಆಡುವ ಆಟಗಳು
1) ವಾಲಿಬಾಲ್ (ನಗದು ಮತ್ತು ಟ್ರೋಫಿ)
2) ಹಗ್ಗ ಜಗ್ಗಾಟ (9 ಜನರ ಗುಂಪು) (ನಗದು ಮತ್ತು ಟ್ರೋಫಿ)
ಮಹಿಳೆಯರು ವಯಸ್ಸಿನ ಮಿತಿ ಇಲ್ಲದೆ ಆಡುವ ಆಟಗಳು
1) ತ್ರೋ ಬಾಲ್ (ನಗದು ಮತ್ತು ಟ್ರೋಫಿ)
2) ಹಗ್ಗ ಜಗ್ಗಾಟ (9 ಜನರ ಗುಂಪು) (ನಗದು ಮತ್ತು ಟ್ರೋಫಿ)
ಮಕ್ಕಳಿಗೆ ಮತ್ತು ವಯಸ್ಕರಿಗೆ ಮನೋರಂಜನಾ ಕ್ರೀಡೆಗಳು
ಸಂಘಟನೆಯ ಪ್ರಮುಖರಾದ ಸವಿತಾ ವಿ. ಶೆಟ್ಟಿ, ಅವಿನಾಶ್ ಜಿ. ಶೆಟ್ಟಿ, ವಿಜಯ ಶೆಟ್ಟಿ ಜಂಟೀ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.



































