ಕಾರ್ಕಳ ವಕೀಲರ ಸಂಘದ ಸಂತಾಪ ಸೂಚನಾ ಸಭೆ

Picture of RB NEWS

RB NEWS

Bureau Report

ಕಾರ್ಕಳ: ಹಿರಿಯ ನ್ಯಾಯವಾದಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ. ವಿಜಯ ಕುಮಾರ್ ರವರ ನಿಧನಕ್ಕೆ, ಕಾರ್ಕಳ ನ್ಯಾಯಾಲಯದ ನ್ಯಾಯಾಧೀಶರ ಸಮ್ಮುಖದಲ್ಲಿ ಕಾರ್ಕಳ ವಕೀಲರ ಸಂಘದ ಸರ್ವ ಸದಸ್ಯರು ಸೇರಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು.‌

ಮೃತರ ಬಗ್ಗೆ ನ್ಯಾಯಾಧೀಶರು, ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು, ತೀವ್ರ ಸಂತಾಪವನ್ನು ವ್ಯಕ್ತಪಡಿಸಿ, ನ್ಯಾಯಾಂಗ ವ್ಯವಸ್ಥೆಗೆ ಅಗಾಧವಾದ ಸೇವೆಯನ್ನು ಸಲ್ಲಿಸಿ, ರಾಜಕೀಯ, ಕೃಷಿ ಹೀಗೆ ವಿವಿಧ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡ ಎಂ.ಕೆ. ವಿಜಯ ಕುಮಾರ್‌ರವರ ನಿಧನವು, ಕಾರ್ಕಳ ವಕೀಲರ ಸಂಘಕ್ಕೆ ಹಾಗು ನ್ಯಾಯಾಂಗ ವ್ಯವಸ್ಥೆಗೆ ತುಂಬಲಾರದ ನಷ್ಟ ಉಂಟಾಗಿದೆಯೆಂದು ಸಂತಾಪವನ್ನು ವ್ಯಕ್ತಪಡಿಸಿದರು.

ಆ ಬಗ್ಗೆ ವಕೀಲರ ಸಂಘದಲ್ಲಿ ನಿರ್ಣಯವನ್ನು ಕೂಡ ಮಾಡಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top