ಕಾರ್ಕಳ ರೋಟರಿ ಕ್ಲಬ್ ವತಿಯಿಂದ ೭೮ನೇ ಸ್ವಾತಂತ್ರ್ಯೋತ್ಸವದ ಆಚರಣೆ
ಕಾರ್ಕಳ : ಕಾರ್ಕಳ ರೋಟರಿ ಸಂಸ್ಥೆ ವತಿಯಿಂದ ನಡೆದ ೭೮ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಕಾರ್ಕಳ ರೋಟರಿ ಪಾರ್ಕಿನಲ್ಲಿ ಮುಖ್ಯ ಅತಿಥಿಯಾದಂತಹ ಮಾಜಿ ಸಹಾಯಕ ಗವರ್ನರ್ ರೋಟೇರಿಯನ್ ಶಶಿಕಾಂತ್ ಕರಿಂಕ ನೆರವೇರಿಸಿದರು

ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಪಾಲಿಸುವ ಮೂಲಕ ದೇಶಪ್ರೇಮವನ್ನು ಮರೆಯಬೇಕು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶುಭ ಹಾರೈಸಿದರು.

ಕಾರ್ಕಳ ರೋಟರಿ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹಮದ್ ಸ್ವಾಗತಿಸಿದರು.
ವೇದಿಕೆಯಲ್ಲಿ ಅನ್ಸ್ ಕ್ಲಬ್ಬಿನ ಅಧ್ಯಕ್ಷರಾದ ವಿನಯ ಶೆಟ್ಟಿ, ಆರ್. ಸಿ. ಸಿ. ಕಾಳಿಕಾಂಬ ಇದರ ಅಧ್ಯಕ್ಷರಾದ ರಮಾನವೀನ್ ವೇದಿಕೆಯಲ್ಲಿದ್ದರು.
ರೊಟೇರಿಯನ್ ವಸಂತ್ ಎಮ್ ನಿರೂಪಿಸಿದರು. ಕಾರ್ಕಳ ರೋಟರಿ ಕಾರ್ಯದರ್ಶಿ ರೋ ಗಣೇಶ್ ಸಾಲಿಯಾನ್ ಧನ್ಯವಾದಗಳನ್ನಿತ್ತರು.
ಈ ಸಂದರ್ಭದಲ್ಲಿ ರೋಟರಿ ಸದಸ್ಯರು, ಅನ್ಸ್ ಕ್ಲಬ್ಬಿನ ಸದಸ್ಯರು ಹಾಗೂ ಆರ್. ಸಿ. ಸಿ. ಕಾಳಿಕಾಂಬ ಸದಸ್ಯರು ಹಾಜರಿದ್ದರು.


































