ಕಾರ್ಕಳ : ರೂ. 15 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ: ಆರೋಪಿಗಳಿಬ್ಬರು ಪರಾರಿ

Picture of RB NEWS

RB NEWS

Bureau Report

ಕಾರ್ಕಳ: ಗೋವಾ ರಾಜ್ಯದಿಂದ ಬಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಶೇಖರಣೆ ಇಟ್ಟಿದ್ದ ಕಾರ್ಕಳದ ಬೋಳ ಗ್ರಾಮದ ಎರಡು ಮನೆಗಳ ಮೇಲೆ ಅಬಕಾರಿ ಇಲಾಖೆ ಹಠಾತ್ ದಾಳಿ ನಡೆಸಿದೆ.

ಡಾ: ಸಿ.ಹೆಚ್.ಬಾಲಕೃಷ್ಣ, ಅಬಕಾರಿ ಜಂಟಿ ಆಯುಕ್ತರು, ಜಾರಿ ಮತ್ತು ತನಿಖೆ, ಮಂಗಳೂರು ವಿಭಾಗ ಹಾಗೂ ಬಿಂದುಶ್ರೀ, ಅಬಕಾರಿ ಉಪ ಆಯುಕ್ತರು, ಉಡುಪಿ ಜಿಲ್ಲೆ ಇವರ ಮಾರ್ಗದರ್ಶನದಂತೆ
ನ. 14ರ ನಸುಕಿನ ಜಾವ 04.50 ರ ವೇಳೆಗೆ ಈ ಕಾರ್ಯಚರಣೆ ನಡೆದಿದೆ.

ಕಾರ್ಕಳ ತಾಲೂಕು ಬೋಳ ಗ್ರಾಮದ ಅಬ್ದನಡ್ಕದಲ್ಲಿರುವ ಅವಿನಾಶ್ ಮಲ್ಲಿ ಎಂಬವರಿಗೆ ಸೇರಿದ ಅವನಿ ನಿಲಯ ಮನೆಗೆ ಹಾಗೂ ಅದೇ ಗ್ರಾಮದ ಮರಿಮಾರು ಗುತ್ತು ಎಂಬ ಮನೆಗೆ ಮೇಲೆ ಏಕಕಾಲದಲ್ಲಿ ಅಬಕಾರಿ ಇಲಾಖೆಯಿಂದ ಕಾರ್ಯಚರಣೆ ನಡುವೆ ನಡೆದಿದೆ.

ಆರೋಪಿಗಳಾದ ಆದಿ ಉಡುಪಿಯ ಪ್ರಶಾಂತ್ ಸುವರ್ಣ ಹಾಗೂ ಬೋಳದ ಅವಿನಾಶ್ ಮಲ್ಲಿ ತಲೆಮರೆಸಿಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿ 272 ಪೆಟ್ಟಿಗೆಗಳಲ್ಲಿ ಒಟ್ಟು 2360.850 ಲೀ. ವಿವಿಧ ಬ್ರಾಂಡ್ ಗಳ ಗೋವಾ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದನ್ನು ಪತ್ತೆ ಹಚ್ಚಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ವಶಪಡಿಸಿಕೊಂಡ ಗೋವಾ ಮದ್ಯದ ಅಂದಾಜು ಮೌಲ್ಯವು ರೂ.15.00 ಲಕ್ಷಗಳಾಗಿರುತ್ತದೆ

ಕಾರ್ಯಾಚರಣೆಯ ನೇತೃತ್ವವನ್ನು ಉಡುಪಿ ಜಿಲ್ಲಾ ಅಬಕಾರಿ ಅಧೀಕ್ಷಕ ಶಿವಪ್ರಸಾದ ವಹಿಸಿದ್ದಾರೆ.

ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಗುರುಮೂರ್ತಿ ಡಿ.ಪಾಲೇಕರ್ ಹಾಗೂ ಉಡುಪಿ ಜಿಲ್ಲಾ ತಂಡದ ಅಬಕಾರಿ ಉಪ ನಿರೀಕ್ಷಕ ರಾಘವೇಂದ್ರ ಇವರು ದಾಖಲಿಸಿರುತ್ತಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಜ್ಯೋತಿ, ಮಿಲ್ಲರ್ ಡಿಸೋಜ, ಉಪ ನಿರೀಕ್ಷಕ ಕೃಷ್ಣ, ನಿತ್ಯಾನಂದ, ಶಿವಶಂಕರ, ದಿವಾಕರ, ಚಂದ್ರ ಮೊಗವೀರ ಹಾಗೂ ಸಿಬ್ಬಂದಿಯವರಾದ ಚಂದ್ರಶೇಖರ ಪಾಟೀಲ, ನಿರ್ಮಲ ನಾಯಕ್, ಶಂಕರಾನಂದ, ನಂಜುಂಡಸ್ವಾಮಿ, ಪ್ರಹ್ಲಾದ, ರಾಜಶೇಖರ, ಖಾಜ ಮೈನುಸಾಬ್, ತಿಪ್ಪಣ್ಣ ಹೊಸಮನಿ, ಕೃಷ್ಣ ಆಚಾರಿ, ಮಹಾಂತೇಶ್ ಹಾಗೂ ವಾಹನ ಚಾಲಕರಾದ ದಿನೇಶ್, ವೆಂಕಟರಮಣ ಗೊಲ್ಲ, ಪ್ರದೀಪ, ಸುಧಾಕರ ಭಾಗವಹಿಸಿರುತ್ತಾರೆ.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top