ಕಾರ್ಕಳ ರಾಮಕ್ಷತ್ರಿಯ ಸಮಾಜದಿಂದ ಶ್ರೀ ವರ ಮಹಾಲಕ್ಷ್ಮಿ ವ್ರತಾಚರಣೆ
ಕಾರ್ಕಳ: ರಾಮಕ್ಷತ್ರಿಯ ಸಮಾಜಬಾಂಧವರಿಂದ
ಶ್ರೀ ವರ ಮಹಾಲಕ್ಷ್ಮೀ ವ್ರತಾಚರಣೆಯು ಕಾರ್ಕಳ ನಗರದ ಶ್ರೀರಾಮ ಸಭಾ ಭವನದಲ್ಲಿ ಜರುಗಿತು.




ಅಜೆಕಾರು ವಿಷ್ಣು ಮೂರ್ತಿ ಭಟ್ ಪುರೋಹಿತರ ಮೂಲಕ ಶ್ರೀ ವರ ಮಹಾಲಕ್ಷ್ಮಿ ಧಾರ್ಮಿಕ ವ್ರತಾಚರಣೆಯ ಸಂಕಲ್ಪ, ವಿಧಿ ವಿಧಾನಗಳನ್ನು
ಬಿ. ಮನಮೋಹನ ರಾವ್ ಮತ್ತು ಶೋಭಾ.ಎನ್ ದಂಪತಿಗಳ ಮುಖೇನ ನೆರವೇರಿಸಲಾಯಿತು.
ವ್ರತಾಚರಣೆಯಲ್ಲಿ ಸಮಾಜದ ಮಹಿಳೆಯರು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಹಾಪೂಜೆ, ಪ್ರಸಾದ ವಿತರಣೆಯ ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ಬೈಲೂರು ಕೌಡೂರು ಕೋಟೆ ಶ್ರೀ ಮಾರಿಯಮ್ಮ ದೇವಿಯ ಸೇವಕನಾಗಿ ಬಾಲ್ಯದಿಂದಲೇ ಸೇವೆ ಸಲ್ಲಿಸುತ್ತಾ ಭಕ್ತಾಧಿಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದ ರಾಮಕ್ಷತ್ರಿಯ ಸಮಾಜದ ನಾಗೇಶ್ ರಾವ್ ಕುಂಜಿಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಅಧ್ಯಕ್ಷತೆಯಲ್ಲಿ ಸಮಾಜದ ಹಿರಿಯರಾದ ಚಂದ್ರಶೇಖರ್ ಕಲ್ಲೊಟ್ಟೆ, ಗೌರವಾಧ್ಯಕ್ಷರಾದ ಪ್ರಸನ್ನ ಕೆ.ಬಿ.ಮತ್ತು ಪಾರ್ಥಸಾರಥಿ, ಉಪಾಧ್ಯಕ್ಷ ಆಂಬಾಪ್ರಸಾದ್.ಪಿ, ಸದಸ್ಯೆ ಶಕುಂತಳಾ.ಎನ್.ರಾವ್ ಬೈಲೂರು ಸನ್ಮಾನವನ್ನು ನೆರವೇರಿಸಿದರು.
ಪ್ರದೀಪ್ ಕುಮಾರ್ ಜೋಡುರಸ್ತೆ ಸನ್ಮಾನಪತ್ರ ವಾಚಿಸಿದರು.
ಶಿಕ್ಷಕ ಸಂಜಯ ಕುಮಾರ್ ನಿರೂಪಿಸಿದರು.
ಶಕುಂತಳಾ. ಎನ್.ರಾವ್ ಬೈಲೂರು ಅನ್ನದಾನದ ಸೇವಾಕರ್ತರಾಗಿದ್ದರು.




































