ಕಾರ್ಕಳ ರಾಮಕ್ಷತ್ರಿಯ ಸಂಘ ಕ್ರೀಡೋತ್ಸವ ಉದ್ಘಾಟನೆ : ಸಂಘಟನೆಯಿಂದ ಸಮುದಾಯದ ಜಾಗೃತಿ



ಕಾರ್ಕಳ: ರಾಮಕ್ಷತ್ರಿಯ ಸಂಘ(ರಿ) ಇದರ ಆಶ್ರಯದಲ್ಲಿ ಶ್ರೀರಾಮ ಚಾರಿಟೇಟಲ್ ಟ್ರಸ್ಟ್ ಸಹಕಾರದೊಂದಿಗೆ ರಾಮಕ್ಷತ್ರಿಯ ಕ್ರೀಡೋತ್ಸವ-2025 ಕಾರ್ಕಳ ಸ್ವರಾಜ್ ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ವಹಿಸಿ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ಸಂಘಟನೆ ಅಗತ್ಯ. ಸಂಘಟನೆ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಕ್ರೀಡಾಕೂಟದಿಂದ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಜೊತೆಗೆ ರಾಷ್ಟ್ರಾಭಿಮಾನ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿ, ಸಮಾಜದ ಒಗ್ಗಟ್ಟಿಗೂ ಕ್ರೀಡೆ ಸಹಕಾರಿಯಾಗಿದೆ ಎಂದು ಹೇಳಿದರು.
ಕ್ರೀಡೋತ್ಸವದ ಉದ್ಘಾಟನೆಯನ್ನು ಕೆ. ನಾಗರಾಜ್ ರಾವ್, ಅಧ್ಯಕ್ಷರು, ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕುಂದಾಪುರ ನೆರವೇರಿಸಿ ಮಾತನಾಡಿ, ಕಿರಿಯರಿಂದ ಹಿರಿಯ ತನಕ ನಡೆಯುವ ವಿವಿಧ ಕ್ರೀಡಾಸ್ಪರ್ಧೆಗಳು ಕ್ರೀಡಾಕೂಟವಾಗಿರದೆ ಕ್ರೀಡೋತ್ಸವವಾಗಿದೆ ಎಂದು ಹೇಳಿ ಸಮಾಜದಿಂದ ಜಿಲ್ಲಾ,ರಾಜ್ಯ, ರಾಷ್ಟ್ರಮಟ್ಟದ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೈಯಕ್ತಿಕವಾಗಿ ಹಾಗೂ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆಯ ವತಿಯಿಂದಲೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸತೀಶ್ ನರಸಿಂಹ ಶೇರುಗಾರ್, ಉಪಾಧ್ಯಕ್ಷರು, ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕುಂದಾಪುರ, ಕೆ.ಎಸ್.ನಂದಕುಮಾರ್, ಅಚಲ ಮೋಟಾರ್ಸ್, ಜೋಡುರಸ್ತೆ, ಮನೀಶ ಬೇಕಲ್, ಬ್ಯಾಂಡ್ಮಿಂಟನ್ ಆಟಗಾರ್ತಿ, ಉಡುಪಿ, ಮತ್ತು ಜೊತೆ ಕ್ರೀಡಾಕಾರ್ಯದರ್ಶಿ ಪ್ರತೀಕ್.ಪಿ ಉಪಸ್ಥಿತರಿದ್ದರು.
ಸಹನಾಶ್ರೀಲಕ್ಷ್ಮೀ ಸ್ವಾಗತಿಸಿದರು. ಶ್ಮ್ರೃತಿ ವಂದಿಸಿದರು. ಮಲ್ಲಿಕಾ ನಿರೂಪಿಸಿದರು. ಅಂಬಾಪ್ರಸಾದ್.ಪಿ, ಪ್ರವೀಣ್.ಕೆ, ಪ್ರದೀಪ್ ಕುಮಾರ್ ಸಂಘದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.






































