ಕಾರ್ಕಳ ರಾಮಕ್ಷತ್ರಿಯ ಸಂಘದಿಂದ ‘ಕ್ಷಾತ್ರ ಚೈತನ್ಯ-2026’ ಯಶಸ್ವಿ ಆಯೋಜನೆ

Picture of RB NEWS

RB NEWS

Bureau Report


ಕಾರ್ಕಳ, ಜೂನ್ 26: ರಾಮಕ್ಷತ್ರಿಯ ಸಂಘ(ರಿ) ಕಾರ್ಕಳ ಇದರ ವತಿಯಿಂದ ಸಮಾಜದ ಆಚಾರ-ವಿಚಾರ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಮಕ್ಕಳಲ್ಲಿ ಒಗ್ಗಟ್ಟು ಮತ್ತು ಮನೋಬಲ ಬೆಳೆಸುವ ಉದ್ದೇಶದಿಂದ ‘ಕ್ಷಾತ್ರ ಚೈತನ್ಯ-2026’ ಕಾರ್ಯಕ್ರಮವು ಶ್ರೀರಾಮ ಸಭಾಭವನ, ಬಂಡಿಮಠದಲ್ಲಿ ಯಶಸ್ವಿಯಾಗಿ ನಡೆಯಿತು.
ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು (ವೈದ್ಯಕೀಯ ನಿರ್ದೇಶಕರು, ಪ್ರಸಾದ್ ನೇತ್ರಾಲಯ) ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಪಾರ್ಥ ಸಾರಥಿ, ಗೌರವಾಧ್ಯಕ್ಷರು, ರಾಮಕ್ಷತ್ರಿಯ ಸಂಘ(ರಿ) ಹಾಗೂ ಅಧ್ಯಕ್ಷರು ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಗೌರವ ಉಪಸ್ಥಿತರಿದ್ದರು.


ಮುಖ್ಯ ಅತಿಥಿಗಳಾಗಿ ಕೆ. ಚಂದ್ರಶೇಖರ ಕಲ್ಪತರು, ಸತೀಶ್ ಬಟ್ವಾಡಿ (ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಮಂಗಳೂರು), ಸಂದೀಪ್ ಜಿ.ಎಸ್. (ಪೊಲೀಸ್ ವೃತ್ತ ನಿರೀಕ್ಷಕರು, ಕಾರ್ಕಳ), ಕಿಶೋರ್ ಕುಮಾರ್ (ಅಧ್ಯಕ್ಷರು, ರಾಮಕ್ಷತ್ರಿಯ ಸಂಘ ಮುಲ್ಕಿ-ಸುರತ್ಕಲ್) ಹಾಗೂ ರಾಘವೇಂದ್ರ ರಾವ್.ಕೆ (ಗೌರವಾಧ್ಯಕ್ಷರು, ರಾಮಕ್ಷತ್ರಿಯ ಯುವ ಸಂಘ, ಉಡುಪಿ) ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 200 ಮಕ್ಕಳು ಭಾಗವಹಿಸಿದ್ದು, 1 ರಿಂದ 10ನೇ ತರಗತಿಯ 125 ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು. 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
‘ನನ್ನ ಭಾರತ’ ಪ್ರಬಂಧ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಒಟ್ಟು 60 ಮಂದಿ ಭಾಗವಹಿಸಿದ್ದರು.


ಭಾರತೀಯ ಭೂಸೇನೆಯ ಫಿರಂಗಿ ವಿದ್ಯೆ ತರಬೇತುದಾರ ಹಾಗೂ ಆಪರೇಶನ್ ಸಿಂಧೂರದಲ್ಲಿ ಭಾಗವಹಿಸಿದ್ದ ಪ್ರದೀಪ್ ಜಿ. ಸಾಸ್ತಾನ ಅವರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ನಿಧನರಾದ ದಿ. ನಾರಾಯಣ ಮಾಸ್ಟರ್ ನಲ್ಲೂರು, ದಿ. ಕೆ.ಪಿ. ಸತೀಶ್ ಕುಮಾರ್ ಕಲ್ಲೊಟ್ಟೆ ಹಾಗೂ ದಿ. ಸನತ್ ಕುಮಾರ್ ಕಾರ್ಕಳ ಅವರಿಗೆ ನುಡಿ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದ ವಿಶೇಷತೆಯಾಗಿ ಸಂಪೂರ್ಣ ನಿರೂಪಣೆಯನ್ನು ಮಕ್ಕಳೇ ನಿರ್ವಹಿಸಿದರು. ಸಮಾಜದ ಬಾಂಧವರು, ಪೋಷಕರು ಹಾಗೂ ಮಕ್ಕಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದರು.
ಪ್ರಾರ್ಥನೆಯನ್ನು ನಿಧಿ.ಡಿ. ರಾವ್ ನಡೆಸಿದರೆ, ಸಹನಾ ಶ್ರೀ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಪ್ರಕೃತಿ ಪಿ. ನಾಯ್ಕ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top