ಕಾರ್ಕಳ ರಾಮಕ್ಷತ್ರಿಯ ತಂಡಕ್ಕೆ ಯುವ ಟ್ರೋಫಿ-2025 ಕ್ರಿಕೆಟ್ ಪ್ರಶಸ್ತಿ

Picture of RB NEWS

RB NEWS

Bureau Report

ಕಾರ್ಕಳ: ದ.ಕ. ಜಿಲ್ಲೆಯ ಪುತ್ತೂರಿನ ಕೊಂಬೆಟ್ಟು ತಾಲೂಕು ಸ್ಟೇಡಿಯಂನಲ್ಲಿ ಮಾಚ್೯ 09ರಂದು ರಾಮಕ್ಷತ್ರಿಯ ಸೇವಾ ಸಂಘ(ರಿ) ಮತ್ತು ರಾಮಕ್ಷತ್ರಿಯ ಯುವ ಸಂಘ, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ದಿ. ಗಣೇಶ್ ಮರೀಲ್ ಸ್ಮರಣಾರ್ಥ ಆಹ್ವಾನಿತ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಅಂತರ್ ಜಿಲ್ಲಾ ಮಟ್ಟದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ರೋಚಕ ಅಂತಿಮ ಸ್ಪರ್ಧೆಯಲ್ಲಿ ಜೋಡುರಸ್ತೆಯ ಪ್ರತೀಕ್.ಪಿ ನೇತೃತ್ವದ ಕಾರ್ಕಳ ರಾಮಕ್ಷತ್ರಿಯ ತಂಡವು ಮಂಗಳೂರಿನ ತುಳುನಾಡು ಕ್ಷತ್ರಿಯ ತಂಡವನ್ನು ಮಣಿಸಿ ಅತ್ಯಾಕರ್ಷಕ ಟ್ರೋಫಿಯೊಂದಿಗೆ ನಗದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ದ್ವಿತೀಯ ಪ್ರಶಸ್ತಿ ಮಂಗಳೂರಿನ ತುಳುನಾಡು ಕ್ಷತ್ರಿಯ ತಂಡದ ಪಾಲಾಯಿತು.

ಕಾರ್ಕಳ ರಾಮಕ್ಷತ್ರಿಯ ತಂಡದ ಆಟಗಾರರಾದ ಶಶಿ ಬೆಸ್ಟ್ ಬೌಲರ್ ಮತ್ತು ಕಾರ್ತಿಕ್ ರವರು ಅಂತಿಮ ಸ್ಪರ್ಧೆಯ ಮ್ಯಾನ್ ಆಫ್ ದಿ ಮ್ಯಾಚ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.

ತಂಡದ ಆಟಗಾರರಾಗಿ ಪ್ರತೀಕ್.ಪಿ (ನಾಯಕ), ಶಶಿ, ಶಶಾಂಕ್, ಆಶೀಸ್, ಕಾರ್ತಿಕ್, ಪ್ರಣೀತ್ ಅಂಡಾರು, ದೀಪಕ್, ಅಕ್ಷಯ್, ಚಂಪು, ಸುಶಾಂತ್, ಸುನೀಲ್ ಕೆರ್ವಾಸೆ, ವಿಘ್ನೇಶ್, ಮಹೇಶ್, ನಾಗರಾಜ್, ನಿಖಿಲ್, ರಂಜಿತ್ ಕೆರ್ವಾಸೆ ಭಾಗವಹಿಸಿದ್ದರು.

ವಿಜೇತ ತಂಡವನ್ನು ಕಾರ್ಕಳ ರಾಮಕ್ಷತ್ರಿಯ ಸಂಘ(ರಿ)ದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್, ಉಪಾಧ್ಯಕ್ಷ ಅಂಬಾಪ್ರಸಾದ್.ಪಿ., ಕಾರ್ಯದರ್ಶಿ ಪ್ರವೀಣ್.ಕೆ, ಸಾಂಸ್ಕೃತಿಕ ಕಾರ್ಯದರ್ಶಿ ಸುಖೇಶ್.ಎನ್.ರಾವ್ ಬೈಲೂರು ಹಾಗೂ ಮಾಧ್ಯಮ ಸಲಹೆಗಾರ ಬಿ. ಮನಮೋಹನ ರಾವ್ ಪಂದ್ಯಾವಳಿಯಲ್ಲಿ ಉಪಸ್ಥಿತರಿದ್ದು ತಂಡವನ್ನು ಅಭಿನಂದಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top