ಕಾರ್ಕಳ ರಾಮಕ್ಷತ್ರಿಯ ಕ್ರೀಡೋತ್ಸವ-2024

Picture of RB NEWS

RB NEWS

Bureau Report

ಕಾರ್ಕಳ : ರಾಮಕ್ಷತ್ರಿಯ ಸಂಘ(ರಿ)ಇದರ ಆಶ್ರಯದಲ್ಲಿ ಶ್ರೀರಾಮ ಚಾರಿಟೇಬಲ್ ಟ್ರಸ್ಟ್(ರಿ)ನ ಸಹಕಾರದೊಂದಿಗೆ ರಾಮಕ್ಷತ್ರಿಯ ಕ್ರೀಡೋತ್ಸವ-2024 ತಾಲೂಕು ಕ್ರೀಡಾಂಗಣದಲ್ಲಿ ಜರುಗಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಅಧ್ಯಕ್ಷರಾದ ಗುರುಪ್ರಸಾದ್ ರಾವ್ ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ ಕುಮಾರ್ ಕಾರ್ನಾಡ್, ನಿವೃತ್ತ ಜನರಲ್ ಮೆನೇಜರ್, ಹೆಚ್.ಡಿ.ಎಫ್.ಸಿ(ಲಿ)ಮುಂಬೈ ಮತ್ತು ಮಾಜಿ ಅಧ್ಯಕ್ಷರು ರಾಮರಾಜ ಕ್ಷತ್ರಿಯ ಸೇವಾ ಸಂಘ, ಮುಂಬೈ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ನಾರಾಯಣ ಎಸ್.ಸೇರ್ವೆಗಾರ್ ದೈಹಿಕ ಶಿಕ್ಷಣ ಶಿಕ್ಷಕರು ಸೈಂಟ್ ಆಗ್ನೇಸ್ ಕಾಲೇಜು ಮಂಗಳೂರು, ವಿಶ್ವನಾಥನ್ ಪಿ. ನಿವೃತ್ತ ಉಪ ತಹಶೀಲ್ದಾರರು ಕಾರ್ಕಳ ಮತ್ತು ಪ್ರಭಾಕರ ರಾವ್ ಅಂಡಾರು ನಿವೃತ್ತ ಮುಖ್ಯೋಪಾಧ್ಯಾಯರು ಪಡಿಬೆಟ್ಟು ಅಂಡಾರು ಉಪಸ್ಥಿತರಿದ್ದರು.

ಗೌರವ ಉಪಸ್ಥಿತರಾಗಿ ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಗೌರವಾಧ್ಯಕ್ಷರಾದ ಪ್ರಸನ್ನ ಕೆ.ಬಿ, ಕಾರ್ಯದರ್ಶಿ ಪ್ರವೀಣ್.ಕೆ ಮತ್ತು ಸಂಕೇತ್.ಎನ್.ರಾವ್.ಬೈಲೂರು ಭಾಗವಹಿಸಿದ್ದರು.

ಧವಳಾ ಕಾಲೇಜ್ ಮಂಗಳೂರಿನ ಉಪನ್ಯಾಸಕಿ, ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ರಾವ್ ಸ್ವಾಗತಿಸಿದರು.

ಸಂಘದ ಜೊತೆ ಕಾರ್ಯದರ್ಶಿ ಪ್ರದೀಪ್.ಕೆ ವಂದಿಸಿದರು.

ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ್.ಪಿ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಸಾಯಂಕಾಲ ನಡೆದ ಸಮಾರೋಪ ಸಮಾರಂಭದ ಅಧಕ್ಷತೆಯನ್ನು ಕಾರ್ಕಳ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ ರಾವ್ ವಹಿಸಿದ್ದರು.

ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ವಲಯ ಬಹುಮಾನ ವಿತರಣೆಗೈದರು.

ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಗುರ್ಮೆ, ಕ್ಲಾಸ್-I ಪಿ.ಡಬ್ಲ್ಯೂ.ಡಿ. ಕಂಟ್ರಾಕ್ಟರ್, ಸತೀಶ್ಚಂದ್ರ ನಾಯಕ್, ಅಧ್ಯಕ್ಷರು ಯುವ ಸಂಘ, ಉಡುಪಿ, ದಿನೇಶ್ ಸೇರ್ವೆಗಾರ್ ಅಂಡಾರು ಪ್ರಗತಿಪರ ಕೃಷಿಕರು ಮತ್ತು ಶಂಕರಾ ರಾವ್ ನಿವೃತ್ತ ಪೋಸ್ಟ್ ಮೇನ್ ಬೈಲೂರು ಉಪಸ್ಥಿತರಿದ್ದರು.

 ಕಾರ್ಕಳ ರಾಮಕ್ಷತ್ರಿಯ ಸಂಘದ ಗೌರವಾಧ್ಯಕ್ಷರು ಹಾಗೂ ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪಾರ್ಥಸಾರಥಿ, ಸಂಘದ ಜೊತೆ ಕ್ರೀಡಾ ಕಾರ್ಯದರ್ಶಿ ಪ್ರತೀಕ್.ಪಿ ಗೌರವ ಉಪಸ್ಥಿತರಿದ್ದರು.  

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಅರುಣಾಕಲಾ ಎಸ್.ರಾವ್ ಮತ್ತು ಪ್ರಣೀತ್.ಪಿ.ರಾವ್ ಅಂಡಾರು ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಸನ್ಮಾನ ಪತ್ರವನ್ನು ಕು.ಸಹನಾ ಶ್ರೀಲಕ್ಷ್ಮೀ ಮತ್ತು ಕು.ಮಾನ್ಯ.ಕೆ.ರಾವ್ ವಾಚಿಸಿದರು.

‌ವಿಜೇತರ ಪಟ್ಟಿಯನ್ನು ಡಾ.ಸುಮ ಬೈಲೂರು ಓದಿದರು.
ಬಿ. ಮನಮೋಹನ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಶಾಂತ್ ಮುಡಾರ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top