ಕಾರ್ಕಳ : ಮುರಿದುಬಿದ್ದ ಮರ, ವಾಹನ ಸಂಚಾರ ಮೊಟಕು
ಕಾರ್ಕಳ : ನಗರದ ಪೆರ್ವಾಜೆ ರಸ್ತೆಯಲ್ಲಿ ಮಂಗಳವಾರ ಸಂಜೆ ವೇಳೆಗೆ ಮರವೊಂದು ಉರುಳಿಬಿದ್ದ ಪರಿಣಾಮ ವಿದ್ಯುತ್ ಕಂಬ ಧರೆಶಾಹಿಯಾಗಿದೆ.
ಪರಿಣಾಮವಾಗಿ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಿದೆ.
ಪೆರ್ವಾಜೆ- ಕಲ್ಲೊಟ್ಟೆ ನಡುವೆ ಹಾದು ಹೋಗುವ ಈ ರಸ್ತೆಯಲ್ಲಿ ವಾಹನ ಸಂಚಾರ ಮೊಟಕುಗೊಂಡಿದೆ.





































