ಕಾರ್ಕಳ ಮಾರುಕಟ್ಟೆ ರಸ್ತೆಯಲ್ಲಿ ತಪ್ಪಿದ ವಿದ್ಯುತ್ ಆಘಾತ

Picture of RB NEWS

RB NEWS

Bureau Report

ಕಾರ್ಕಳ : ಮಾರುಕಟ್ಟೆ ರಸ್ತೆ ಯಲ್ಲಿನ ಶಿವಂ ಇಲೆಕ್ಟ್ರಾನಿಕ್ ಎಂಡ್ ಕಮ್ಯುನಿಕೇಶನ್ಸ್ ಸೆಂಟರ್ ನಲ್ಲಿ ವಿದ್ಯುತ್ ಆಘಾತ ಸಂಭವಿಸಿದ್ದು, ತ್ವರಿತ ಗತಿಯಲ್ಲಿ ಕಾರ್ಕಳದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿರುವುದರಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ.

ಸೋಮವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ.

ಸ್ವಿಚ್ ಬೋಡ್೯ನಲ್ಲಿ ಬೆಂಕಿ ಹೊತ್ತಿ ಉರಿದಿತು. ಅದೇ ಸಂದರ್ಭದಲ್ಲಿ ಮಳಿಗೆಯ ಬಾಗಿಲು ತೆರೆಯಲು ಮುಂದಾದಾಗ ಸುಟ್ಟ ವಾಸನೆ ಹಾಗೂ‌ ಹೊಗೆ ಆವರಿಸಿಕೊಂಡಿರುವುದರಿಂದ ಮಾಹಿತಿ ಬೆಳಕಿಗೆ ಬಂದಿದೆ.

ಅಗ್ನಿಶಾಮಕ ಅಧಿಕಾರಿ ಅಲ್ಬಟ್೯ ಮೋನಿಸಾ, ಅಗ್ನಿಶಾಮಕ ಉಪಾಧಿಕಾರಿ ಕೆ. ಚಂದ್ರಶೇಖರ, ಪ್ರಮುಖ ಅಗ್ನಿಶಾಮಕ ದಳದ ಹರಿಪ್ರಸಾದ್ ಶೆಟ್ಟಿಗಾರ್, ಸಿಬ್ಬಂದಿಗಳಾದ ಗಣೇಶ್ ಆಚಾರ್ಯ, ಬಸವರಾಜು ನಿರ್ವಣಿ, ಚಾಲಕ ಸಂಜಯ್ ಸಂಜಯ್ ಕಾರ್ಯಚರಣೆಯಲ್ಲಿ ಪಾಲ್ಗೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top