ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ಜಯಂತಿ
ಕಾರ್ಕಳ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುಧಾಕರ ದಾನಶಾಲೆ ಅವರು ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಜೊತೆಗೆ ಹಲವಾರು ಆಧುನಿಕ ಯೋಜನೆಗಳಿಗೆ ನಾಂದಿ ಹಾಡಿದ್ದಾರೆ, ಅದರ ಒಂದು ಸಣ್ಣ ಉದಾಹರಣೆಯೆಂದರೆ ವಿದ್ಯುತ್ ಇಲಾಖೆಯಿಂದ ಮನೆ ಮನೆ ವಿತರಣೆಯಾಗುವ ವಿದ್ಯುತಿಗೆ ಬಿಲ್,ನ್ನು ನೀಡುವ ಕಲ್ಪನೆಯನ್ನು ದೇಶಕ್ಕೆ ಕೊಟ್ಟವರು ಅಂಬೇಡ್ಕರವರು. ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್ ಅವರ ವಿರುದ್ದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರವನ್ನು ಮಾಡುತ್ತಿರುವುದು ಖೇದಕರ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಮಾತನಾಡಿ, ಸರ್ವರಿಗೂ ಸಮಬಾಳು ಸಮಪಾಲು ನೀಡುವ ದ್ಯೇಯೊದ್ದೇಶದಿಂದ ರಚಿತವಾದ ಭಾರತದ ಸಂವಿಧಾನದ ನಿಜವಾದ ಆಶಯಗಳು ಇಂದು ಈಡೇರುತ್ತಿಲ್ಲ, ಸಂವಿಧಾನಕ್ಕೆ ವಿರುದ್ದವಾಗಿ ಜಾತಿ ಅಸಮಾನತೆಗಳು ವಿವಿಧ ರೂಪದಲ್ಲಿ ನಿರಂತರವಾಗಿ ಮುಂದುವರೆಯುವುದು ಬೇಸರದ ಸಂಗತಿಯಾಗಿದೆ, ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರು ವಕೀಲ ರೆಹಮತುಲ್ಲಾ ಮಾತನಾಡಿ, ಸಂವಿಧಾನವನ್ನು ಕಾನೂನಿನ ಮೂಲಕ ಭಾರತದಲ್ಲಿ ಅನುಷ್ಠಾನಗೊಳಿಸುವಲ್ಲಿ ಅಂಬೇಡ್ಕರ್ ಪಾತ್ರ ಪ್ರದಾನವಾಗಿದ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪ್ರಭಾಕರ ಬಂಗೇರ, ಮಾಜಿ ಪುರಸಭಾ ಅಧ್ಯಕ್ಷ ಸುಭಿತ್.ಎನ್.ಆರ್, ಪುರಸಭಾ ಸದಸ್ಯರಾದ ಪ್ರತಿಮಾ ರಾಣೆ, ಪ್ರಭಾ ಕಿಶೋರ್, ಅಶ್ಪಕ್ ಅಹಮದ್, ವಿವೇಕಾನಂದ ಶೆಣೈ, ಮೀನುಗಾರ ಘಟಕದ ಅದ್ಯಕ್ಷ ಮುರಳಿ ರಾಣೆ , ಪುರಸಭಾ ಸದಸ್ಯರಾದ ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುನಿತಾ ಶೆಟ್ಟಿ, ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರುಕ್ಮಯ ಶೆಟ್ಟಿಗಾರ್, ಸುದರ್ಶನ್ ಬಂಗೇರ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸ್ವಾಗತಿಸಿದರು. ನಾಗೇಶ ಆಚಾರ್ಯ ಬೆಳ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.
ಅಕ್ರಮ ಸಕ್ರಮ ಸಮಿತಿಯ ರಮೇಶ್ ಬೆಜಕಳ ಅವರು ಧ್ಯೆಯ ಗೀತೆಯನ್ನು ಹಾಡಿದರು ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಧನ್ಯವಾದವಿತ್ತರು.














