ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸರ್ವಜ್ಞ ಜಯಂತಿ ಆಚರಣೆ

Picture of RB NEWS

RB NEWS

Bureau Report

ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ ನೆಲ್ಲಿಗುಡ್ಡೆಯವರ ನೇತೃತ್ವದಲ್ಲಿ ಕಾರ್ಕಳ ತಾಲೂಕು ಸರ್ವಜ್ಞ ವ್ರತ್ತದ ಬಳಿ ಇರುವ ಸರ್ವಜ್ಞ ಪ್ರತಿಮೆಗೆ ದೀಪ ಬೆಳಗಿಸಿ ಹೂ ಹಾರ ಹಾಕುವ ಮೂಲಕ ಸರ್ವಜ್ಞ ಜಯಂತಿಯನ್ನು ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಮಾತನಾಡಿ ತ್ರಿಪದಿ ಬ್ರಹ್ಮ ತತ್ವಜ್ಞಾನಿ ಸರ್ವಜ್ಞ ಅವರ ತತ್ವದರ್ಶಗಳು ಮನುಕುಲಕ್ಕೆ ಸದಾ ಕಾಲವು ಆದರ್ಶವಾಗಿದೆ, ಸರ್ವಜ್ಞರ ಅನುಯಾಯಿಗಳಾದ ಕುಲಾಲ ಸಮಾಜ ಬಾಂಧವರು ಜಾತ್ಯಾತೀತ ತತ್ವಗಳೊಂದಿಗೆ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕುಲಾಲ ಸಮಾಜದ ಮುಖ‌ಂಡ ಕುಶ.ಆರ್.ಮೂಲ್ಯ ಮಾತನಾಡಿ, ಸರ್ವಜ್ಙ ಅವರ ತ್ರಿಪದಿ ಸಾಹಿತ್ಯದ ಮೇರು ಕವಿಗಳಾಗಿದ್ದು ಸಂತಕವಿ ಎಂದೇ ಪ್ರಸಿದ್ದಿ ಪಡೆದು ಅವರ ಜೀವನಾದರ್ಶಗಳು ನಮಗೆ ಪ್ರೇರಣೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮೋಹನ್, ಬ್ಲಾಕ್ ಉಪಾದ್ಯಕ್ಷ ಜಾರ್ಜ್ ಕ್ಯಾಸ್ತಲಿನೋ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಭೂನ್ಯಾಯ ಮಂಡಳಿ ಸದಸ್ಯ ಸುನೀಲ್ ಭಂಡಾರಿ, ಗ್ಯಾರಂಟಿ ಸಮಿತಿ ಸದಸ್ಯ ಪಿಲಿಪ್ ಮಸ್ಕರೇನಸ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ, ಅಕ್ರಮ ಸಕ್ರಮ ಸದಸ್ಯೆ ಸುನೀತಾ ಶೆಟ್ಟಿ, ಮಾಜಿ ಪುರಸಭಾ ಅದ್ಯಕ್ಷೆ ಪ್ರತಿಮಾ ರಾಣೆ, ವಿಶ್ವನಾಥ್ ಭಂಡಾರಿ, ಕುಕ್ಕುಂದೂರು ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷ ರುಕ್ಮಯ ಶೆಟ್ಟಿಗಾರ್, ಸಂತೋಷ್ ಶೆಟ್ಟಿ, ದಿನಕರ್ ಶೆಟ್ಟಿ ಪಳ್ಳಿ, ವಿಶ್ವನಾಥ್ ಪಳ್ಳಿ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.

ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿ ಸ್ವಾಗತಿಸಿದರು, ಗ್ಯಾರಂಟಿ ಯೋಜನೆ ಸದಸ್ಯ ಹೇಮಂತ್ ಧನ್ಯವಾದವಿತ್ತರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top