ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿಆರ್.ರಾಜು ಇನ್ನಿಲ್ಲ
ಕಾರ್ಕಳ: ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ, ಬಣಕಲ್ ರಶ್ಮಿ ಎಸ್ಟೇಟ್ ಹಾಘೂ ರಶ್ಮಿ ಕನ್ಸ್ಟçಕ್ಷನ್ ಮಾಲಕ ಡಿ.ಆರ್. ರಾಜು(64) ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.




ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲ್ಲೆಯಲ್ಲಿ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದಕೀಯ ಪರೀಕ್ಷೆಯಿಂದ ಅವರು ಮೃತಪಟ್ಟಿರುವುದು ದೃಢ ಪಟ್ಟಿದೆ.

ರವಿವಾರದಂದು ಕಾರ್ಕಳದಲ್ಲಿ ಜರುಗಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
18-11-2024 ಸೋಮವಾರದಂದು ಮಧ್ಯಾಹ್ನ 12 .00 ಗಂಟೆಗೆ ಕಾರ್ಕಳ ನಗರದ ಭುವನೇಂದ್ರ ಕಾಲೇಜು ರಸ್ತೆಯಲ್ಲಿರುವ ಸ್ವಗೃಹದಲ್ಲಿ ಡಿ. ಆರ್.ರಾಜು ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಕುಟುಂಬ ಮೂಲ ತಿಳಿಸಿದೆ.














