ಕಾರ್ಕಳ: ಫೆ.12ರಂದು ಶ್ರೀ ಬಾಹುಬಲಿ ಸ್ವಾಮಿಯ ರಥಯಾತ್ರಾ ಮಹೋತ್ಸವ
ಕಾರ್ಕಳ: ಧಾರ್ಮಿಕ ಹಿನ್ನಲೆಯುಳ್ಳ ಕಾರ್ಕಳ ಗೋಮ್ಮಟ್ಟೇಶ್ವರ ಬೆಟ್ಟದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ರಥಯಾತ್ರಾ ಮಹೋತ್ಸವವು ಫೆ.12ರಂದು ಜರುಗಲಿರುವುದು.
ಅಂದು ರಾತ್ರಿ 9.30ಕ್ಕೆ ಜರಗಲಿರುವ ಧಾರ್ಮಿಕ ವಿಧಿವಿಧಾನವನ್ನು ಕಾರ್ಕಳ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವiಹಾಸ್ವಾಮೀಜಿ ನೇತೃತ್ವದಲ್ಲಿ ಪಾವನ ಸಾನಿಧ್ಯದಲ್ಲಿ ಪ್ರವಚನ ಮತ್ತು ಧಾರ್ಮಿಕ ಗೋಷ್ಠಿ ಜರುಗಲಿದೆ.
ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ. ಪಿ.ಎಲ್. ಧರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 10.00 ಗಂಟೆಗೆ 108 ಕಲಶಗಳಿಂದ ಪಾದಾಭಿಷೇಕ ಮತ್ತು ಮಧ್ಯಾಹ್ನ ಸಂಘ ಸಂತರ್ಪಣೆ ನಡೆಯಲಿದೆ.
ರಾತ್ರಿ 7.00 ಗಂಟೆಗೆ ಶ್ರೀ ಜೈನ ಮಠದಿಂದ ಅಗ್ರೋದಕ ಮೆರವಣಿಗೆ. ರಾತ್ರಿ 7.30ರಿಂದ 8.30ರ ತನಕ ಜಿವವಾಣಿ ಮಹಿಳಾ ಸಮಾಜ ಹಾಗೂ ಜೈನ್ ಮಿಲನ್ ಕಾರ್ಕಳ ಇವರಿಂದ ಜಿನಭಕ್ತಿ ಗೀತೆಗಳು ನಡೆಯಲಿದೆ. ರಾತ್ರಿ 9.30ಕ್ಕೆ ರಥಯಾತ್ರಾ ಮಹೋತ್ಸವ ಮತ್ತು 108 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ.
ಫೆಬ್ರವರಿ 13ರಂದು ಅವಭೃತ ಕುಂಕುಮೋತ್ಸವ ಮತ್ತು ಧ್ವಜಾವರೋಹಣ ನೆರವೇರಲಿದೆ.
ಈ ಎಲ್ಲಾ ಕಾರ್ಯಕ್ರಮವು ಶ್ರೀ ಜೈನಧರ್ಮ ಜೀಣೋದ್ಧಾರಕ ಸಂಘ(ರಿ) ಕಾರ್ಕಳ ಇವರ ವತಿಯಿಂದ ಆಯೋಜಿಸಲಾಗಿದೆ.
ಅಧ್ಯಕ್ಷತೆಯನ್ನು ಡಾ. ಡಿ.ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಕಾರ್ಯಧ್ಯಕ್ಷತೆಯನ್ನು ಡಾ. ಎಂ.ಎನ್.ರಾಜೇoದ್ರ ಕುಮಾರ್ ವಹಿಸಲಿದ್ದಾರೆ. ಕಾರ್ಯದರ್ಶಿಯಾಗಿ ಎಂ.ಕೆ. ವಿಜಯಕುಮಾರ್ ವಹಿಸಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜೈನ ಯುವಜನ ಸಂಘ(ರಿ) ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಒಳಗೊಂಡಿದ್ದಾರೆ.

































