ಕಾರ್ಕಳ: ಪುರಸಭಾ ಚುನಾವಣೆಯ ಅಂತಿಮಹಂತಕ್ಕೆ ತಲುಪಿದ್ದು, ಬಿಜೆಪಿಯಿಯಿಂದ ಅದ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಕೋಟ್ಯಾನ್ ( ಶಾಸಕ ಸುನೀಲ್ ಕುಮಾರ್ ಅವರ ಸೋದರಮಾವ) ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಶುಭದ ರಾವ್, ಉಪಾಧ್ಯಕ್ಷ ಸ್ಥಾನಕ್ಕೆ ವಿನ್ನಿಬೋಲ್ಡ್ ಮೆಂಡೋನ್ಸಾ ನಾಮಪತ್ರ ಸಲ್ಲಿಸಿದ್ದಾರೆ.
ಕಾರ್ಕಳ : ಕಾಂಗ್ರೆಸ್ -ಬಿಜೆಪಿ ಸದಸ್ಯರು ಸಮಬಲ ಹೊಂದಿದ್ದು, ಪಕ್ಷೇತರ ಸದಸ್ಯರ ಮತ ನಿರ್ಣಯವಾಗಿದ್ದರೂ, ಸಂಸದ ಹಾಗೂ ಶಾಸಕರ ಬಲದೊಂದಿಗೆ ಕಾರ್ಕಳ ಪುರಸಭೆ ಬಿಜೆಪಿ ಪಾಲಾಗುವುದು ಖಚಿತವಾಗಿದೆ.
ಕಾರ್ಕಳ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ
ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪುರಸಭಾ ಸದಸ್ಯರಾಗಿದ್ದಾರೆ. ನಂತರದ ದಿನಗಳಲ್ಲಿ ಅವರನ್ನು ಬಿಜೆಪಿ ಮರು ಸೇರ್ಪಡೆ ಪ್ರಯತ್ನಗಳು ನಡೆದಿತ್ತಾದರೂ, ಮುಕ್ತಕಂಠದಿಂದ ಪಕ್ಷಕ್ಕೆ ಬರಮಾಡಿಕೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲಗೊಂಡಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದ ಶ್ರೀರಾಮ ಸೇನೆಯ ಪರಮೋಚ್ಚ ನಾಯಕ ಪ್ರಮೋದ್ ಮುತಾಲಿಕ್ ಪರ ಚುನಾವಣೆ ಪ್ರಚಾರ ದಲ್ಲಿ ಲಕ್ಷ್ಮೀನಾರಾಯಣ ಮಲ್ಯ ತೊಡಗಿಸಿಕೊಂಡಿದ್ದರು.
ನಾಮನಿದೇಶನ ಸದಸ್ಯರು
ರಾಜ್ಯದಲ್ಲಿ ಆಡಳಿತರೂಢ ಪಕ್ಷದ ನಿರ್ದೇಶನದಂತೆ ಕಾರ್ಕಳ ಪುರಸಭೆಗೆ ಐವರು ನಾಮನಿರ್ದೇಶನ ಸದಸ್ಯರು ಚುನಾಯಿತರಾಗಲಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಾಗಲಿದ್ದಾರೆ.
ಬಲಾಬಲ
23 ಸದಸ್ಯರನ್ನು ಹೊಂದಿರುವ ಕಾರ್ಕಳ ಪುರಸಭೆಯಲ್ಲಿ 11 ಮಂದಿ ಬಿಜೆಪಿ, 11 ಮಂದಿ ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ.































