ಕಾರ್ಕಳ-ಪಡುಬಿದ್ರಿ ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಬಿಜೆಪಿ ಅಕ್ಷೇಪ

Picture of RB NEWS

RB NEWS

Bureau Report

ಪ್ರಸ್ತಾಪಿತ ಟೋಲ್ ಸಂಗ್ರಹ ಕೇಂದ್ರ ನಿರ್ಮಾಣವಾದಲ್ಲಿ ಕಾರ್ಕಳ-ಬೆಳ್ಳಣ್ ಮೂಲಕ ಮುಲ್ಕಿ-ಮಂಗಳೂರು ಸಂಚರಿಸುವವರಿಗೆ ಕೇವಲ 06 ಕಿ.ಮಿ. ಅಂತರದಲ್ಲಿ ಎರಡು ಬಾರಿ ಟೋಲ್ ಪಾವತಿಸಬೇಕಾಗುತ್ತದೆ. ಈಗಾಗಲೇ ಜನರು ರಾಜ್ಯ ಸರ್ಕಾರದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದಲೇ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಮತ್ತೆ ಟೂಲ್ ಸಂಗ್ರಹ ಮಾಡಿದ್ದಲ್ಲಿ ರಾಜ್ಯ ಸರ್ಕಾರ ಮಾಡುವ ಈ ಭಾಗದ ಜನರಿಗೆ ಅತ್ಯಧಿಕ ಆರ್ಥಿಕ ಹೊರೆಯಾಗಲಿದೆ. ಇದು ಕಾರ್ಕಳ ಮತ್ತು ಬೆಳ್ಳಣ್ ಆಸುಪಾಸಿನ ಜನರಿಗೆ ಸರ್ಕಾರ ಮಾಡುತ್ತಿರುವ ಅತೀ ದೊಡ್ಡ ದ್ರೋಹವಾಗಿರುತ್ತದೆ.

ಹಿಂದೊಮ್ಮೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಳ್ಮಣ್ ಸಮೀಪ ಟೋಲ್ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆ ಸಂದರ್ಭದಲ್ಲಿ ಶಾಸಕ ವಿ ಸುನಿಲ್ ಕುಮಾರ್ ಹಾಗೂ ಸ್ಥಳೀಯರ ತೀವ್ರ ಹೋರಾಟದ ಫಲವಾಗಿ ಈ ಆದೇಶವನ್ನು ಹಿಂಪಡೆದಿತ್ತು. ಪ್ರಸ್ತುತ ರಾಜ್ಯ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನಿಲುವಿನಿಂದಾಗಿ ರಾಜ್ಯವು ದಿವಾಳಿಯತ್ತ ಸಾಗುತ್ತಿದ್ದು, ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಈ ಭಾಗದಲ್ಲಿ ಟೋಲ್ ಸಂಗ್ರಹ ಮಾಡುವುದಕ್ಕೆ ಮುಂದಾಗುವ ಮುಖಾಂತರ ಜನರಿಗೆ ಮತ್ತಷ್ಟು ತೊಂದರೆ ನೀಡುತ್ತಿದೆ.

ಪ್ರಸ್ತಾಪಿತ ಟೋಲ್ ಸಂಗ್ರಹ ಕೇಂದ್ರದಿಂದ ಜನರಿಗಾಗುವ ತೊಂದರೆಯನ್ನು ಈ ಕೂಡಲೆ ತಾವು ಸರ್ಕಾರದ ಗಮನಕ್ಕೆ ತರುವುದರೊಂದಿಗೆ ರಾಜ್ಯ ಸರ್ಕಾರ ಟೋಲ್ ಸಂಗ್ರಹ ನೀಡಿರುವ ಕಾರ್ಯದೇಶವನ್ನು ತಕ್ಷಣವೇ ಹಿಂಪಡೆಯಬೇಕು ಇಲ್ಲವಾದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ಳಣ್ ಶಕ್ತಿ ಕೇಂದ್ರದ ಎಲ್ಲಾ ಗ್ರಾಮಗಳ ಪ್ರಮುಖರೊಂದಿಗೆ ಸ್ಥಳೀಯ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿಯೊಂದಿಗೆ ಕೈಜೋಡಿಸಿ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಡುಬಿದ್ರಿ-ಬೆಳ್ಳಣ್ ರಸ್ತೆಯಲ್ಲಿ ಆಗಸ್ಟ್ 16ರಿಂದ ಟೋಲ್ ಸಂಗ್ರಹ ಮಾಡುವಂತೆ ಸರ್ಕಾರವು ಹಾಸನ ಮೂಲದ ಭಾರತೀ ಕನ್ಸ್‌ಟ್ರಕ್ಷನ್ ಸಂಸ್ಥೆಗೆ ಆದೇಶ ನೀಡಿರುವ ಕ್ರಮ ವಿರುದ್ಧ ಬಿಜೆಪಿ ಬೆಳ್ಮಣ್ ಶಕ್ತಿಕೇಂದ್ರದ ಪದಾಧಿಕಾರಿಗಳು ಉಡುಪಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತಿರುವುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top