ಕಾರ್ಕಳ: ನಾಮನಿರ್ದೇಶಿತ ಸದಸ್ಯರಾಗಿ ನಿಯೋಜನೆ
ಕಾರ್ಕಳ: ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕರಣ11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಡುಪಿ ಜಿಲ್ಲೆಯ ಕಾರ್ಕಳ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿ ಅದೇಶಿಸಿದೆ.
ಪತ್ತೊಂಜಿಕಟ್ಟೆಯ ಪ್ರಸನ್ನ ಶೆಟ್ಟಿಗಾರ್, ಪತ್ತೊಂಜಿಕಟ್ಟೆಯ ಸುನೀಲ್ ದೇವಾಡಿಗ, ಹಿರಿಯಂಗಡಿಯ ಶಿವಾಜಿ ರಾವ್, ಆನೆಕರೆಯ ನಾಗೇಶ್ ಹೆಗ್ಡೆ ಇವರು ನಾಮನಿರ್ದೇಶಿತ ಸದಸ್ಯರುಗಳಾಗಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಸರ್ಕಾರ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ದೃಢಪಡಿಸಿದ್ದಾರೆ.





































