ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಘದಿಂದ ಆಟಿಡೋಂಜಿದಿನ ಕಾರ್ಯಕ್ರಮ
ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಫದಿಂದ ಕಾರ್ಕಳ ಶ್ರೀ ರಾಧಾಕೃಷ್ಣ ಸಭಾ ಭವನದಲ್ಲಿ ಆಟಿದೋಂಜಿ ದಿನ ಕಾರ್ಯಕ್ರಮ ಜರುಗಿತು.
ಶ್ರೀ ವಾದಿರಾಜ ಆಚಾರ್ಯ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು .

ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸೌಜನ್ಯ ಉಪಾಧ್ಯಾಯ, ಕಾರ್ಯದರ್ಶಿ ಬಾಲಕೃಷ್ಣ ರಾವ್ , ಕೋಶಾಧಿಕಾರಿ ಕೇಶವ ಮರಾಟೆ. ಜನಾರ್ಧನ ಇಡ್ಯಾ, ರೇಖಾ ಉಪಾಧ್ಯಾಯ, ಭಾರ್ಗವ ಆಚಾರ್ ,ಅನಂತಪದ್ಮನಾಭ ತಂತ್ರಿ, ವಿಜಯ ಕುಮಾರ್ ತಂತ್ರಿ, ವೈ ಪ್ರಶಾಂತ್ ಭಟ್, ಪದ್ಮನಾಭ ಭಂಡಿ,ರಾಜೇಶ್ ಗೋರೆ,ಸುಬ್ರಮಣ್ಯ ಭಟ್ ರೆಂಜಾಳ,ಗಣಪಯ್ಯ, ಚಿತ್ಪಾವನ ಸಂಘದ ಅಧ್ಯಕ್ಷರಾದ ರತ್ನಕರ ಮರಾಟೆ, ಹಾಗೂ ಹವ್ಯಕ ಸಭಾದ ಅಧ್ಯಕ್ಷರಾದ ಕೇಶವ್ ಭಟ್ , ಶಿವಳ್ಳಿ ಬ್ರಾಹ್ಮಣ ಪರಿಷದ್ ನ ಅಧ್ಯಕ್ಷ ವೆಂಕಟರಾಜ ಜೋಯಿಸ್, ಶ್ರೀ ಶಂಕರ ಪ್ರತಿಷ್ಠಾನ ಅಧ್ಯಕ್ಷ ಕೇಶವ್ ರಾವ್ , ಯುವ ಬ್ರಾಹ್ಮಣ ಪರಿಷದ್ ಅಧ್ಯಕ್ಷ ರಾಮಚಂದ್ರ ಭಟ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ತ್ರಿಮತಸ್ತ ವಿಪ್ರ ಬಾಂಧವರು ಉಪಸ್ಥಿತರಿದ್ದರು.
ಪಾವನ ಪ್ರಾರ್ಥನೆಗೈದರು. ಶಾರ್ವರಿ ಉಪಾಧ್ಯಾಯ ನಿರೂಪಿಸಿದರು. ಕಾರ್ಯದರ್ಶಿ ಬಾಲಕೃಷ್ಣ ರಾವ್ ಧನ್ಯವಾದ ಅರ್ಪಿಸಿದರು. ರೇಖಾ ಉಪಾಧ್ಯಾಯ ಆಗಮಿಸಿದ ಎಲ್ಲಾ ವಿಪ್ರರಿಗೆ ಬೆಂಕಿ ಇಲ್ಲದ ಅಡುಗೆ, ಪೂಕಳಂ ಸ್ಪರ್ಧೆ, ಫ್ಲವರ್ ಅರೇಂಜ್ಮೆಂಟ್, ರಸಪ್ರಶ್ನೆ, ಸ್ಮರಣ ಶಕ್ತಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಇನ್ನೂ ಹಲವಾರು ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಸ್ಪರ್ಧೆಯ ವಿಜೇತರಿಗೆ ವಿಶೇಷ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ವೃಂದ ಶೆಟ್ಟಿ, ಶಶಿಕಲಾ ಕೆ ಹೆಗ್ಡೆ ಹಾಗೂ ಗೀತಾ ಕಾಮತ್ ಆಗಮಿಸಿದ್ದರು. ನೆರೆದಿದ್ದ ಎಲ್ಲರಿಗೂ ಲಘು ಉಪಾಹಾರ ಹಾಗೂ ರಾತ್ರಿ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಕೊನೆಯದಾಗಿ ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.














