ಕಾರ್ಕಳ : ಶ್ರೀ ರಾಧಾಕೃಷ್ಣ ಸಭಾಭವನದಲ್ಲಿ ನಡೆದ ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಘ (ರಿ ) ಇದರ 39 ನೇ ವಾರ್ಷಿಕ ಮಹಾಸಭೆ ಜರುಗಿತು.
ಮುಂದಿನ ಎರಡು ವರ್ಷ 2024-25 ಹಾಗೂ 2025-26 ನೇ ಸಾಲಿಗೆ ಅಧ್ಯಕ್ಷರಾಗಿ ಸೌಜನ್ಯ ಉಪಾಧ್ಯಾಯ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾಗಿ ಎಮ್.ರತ್ನಾಕರ ಮರಾಠೆ , ಕಾರ್ಯದರ್ಶಿಯಾಗಿ ಬಾಲಕೃಷ್ಣ ರಾವ್, ಕೋಶಾಧಿಕಾರಿಯಾಗಿ ಎಮ್.ಕೇಶವ ಮರಾಠೆ,ಜೊತೆ ಕಾರ್ಯದರ್ಶಿಯಾಗಿ ಪದ್ಮನಾಭ ಭಂಡಿ, ಸಂಘಟನಾ ಕಾರ್ಯದರ್ಶಿಯಾಗಿ ಗಣಪ್ಪಯ್ಯ.ಹೆಚ್. ಕೆ ಆಯ್ಕೆಯಾಗಿರುತ್ತಾರೆ.






































