ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್‌ನಿಂದ ₹50 ಸಾವಿರ ದೇಣಿಗೆ

Picture of RB NEWS

RB NEWS

Bureau Report

ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್‌ನಿಂದ ₹50 ಸಾವಿರ ದೇಣಿಗೆ


ಕಾರ್ಕಳ: ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ಮಕ್ಕಳ ವಾರ್ಡಿನ ಪೈಂಟಿಂಗ್, ಸುಂದರೀಕರಣ ಹಾಗೂ ಗೋಡೆ ಚಿತ್ರಗಳ ಬಿಡಿಸುವಿಕೆಗಾಗಿ ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ₹50 ಸಾವಿರ ದೇಣಿಗೆಯನ್ನು ನೀಡಲಾಯಿತು.
ಸಂಘದ ಸದಸ್ಯ ಅಮೀರ್ ಹುಸೇನ್ ಅವರ ಸಹಕಾರದೊಂದಿಗೆ ನೀಡಲಾದ ಈ ದೇಣಿಗೆಯ ಚೆಕ್ಕನ್ನು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವರ ಅವರಿಗೆ ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯ ಕಿವಿ–ಮೂಗು–ಗಂಟಲು ತಜ್ಞ ಡಾ. ಅನಂತ್ ಕಾಮತ್, ಮಕ್ಕಳ ತಜ್ಞೆ ಡಾ. ಸೌಜನ್ಯ, ಅರಿವಿಳಿಕೆ ತಜ್ಞ ಡಾ. ತುಷಾರ್, ಎಲುಬು ಹಾಗೂ ಕೀಲು ತಜ್ಞ ಡಾ. ನಿತಿನ್ ಶೆಟ್ಟಿ, ಫಿಜಿಷಿಯನ್ ಡಾ. ಚಂದ್ರಕಾಂತ್, ಪ್ರಸೂತಿ ತಜ್ಞೆ ಡಾ. ಜಾಸ್ಮಿನ್ ಉಪಸ್ಥಿತರಿದ್ದರು.
ಅಲ್ಲದೆ ಜಮೀಯತುಲ್ ಫಲಾಹ್ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಅಧ್ಯಕ್ಷ ಅಷ್ಪಾಕ್ ಅಹ್ಮದ್, ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ಕೋಶಾಧಿಕಾರಿ ಹಾಗೂ ಪತ್ರಕರ್ತ ಮೊಹಮ್ಮದ್ ಶರೀಫ್, ಅಮೀರ್ ಹುಸೇನ್ ಸೇರಿದಂತೆ ಸಂಘದ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top