ಕಾರ್ಕಳ ತಾಲೂಕು ಬ್ರಾಹ್ಮಣ ಸಂಘ :40ನೇ ವಾರ್ಷಿಕಮಹಾಸಭೆ ಹಾಗೂ ಬ್ರಾಹ್ಮಣ ಸಮ್ಮೇಳನ

Picture of RB NEWS

RB NEWS

Bureau Report

ಕಾರ್ಕಳ ತಾಲೂಕು ಬ್ರಾಹ್ಮಣ ಸಂಘ :40ನೇ ವಾರ್ಷಿಕಮಹಾಸಭೆ ಹಾಗೂ ಬ್ರಾಹ್ಮಣ ಸಮ್ಮೇಳನ

ಕಾರ್ಕಳ : ತಾಲೂಕು ಬ್ರಾಹ್ಮಣ ಸಂಘ(ರಿ.) ಕಾರ್ಕಳ ಇದರ 40ನೇ ಮಹಾಸಭೆ, ವಾರ್ಷಿಕೋತ್ಸವ ಹಾಗೂ ಬ್ರಾಹ್ಮಣ ಸಮ್ಮೇಳನ ಶ್ರೀ ರಾಧಾಕೃಷ್ಣ ಸಭಾಭವನದಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಹಿರಿಯ ಸದಸ್ಯ ರಾಮ ಭಟ್ಟ ಕೋಟೆ ಉಪಸ್ಥಿತರಿದ್ದರು.

ಕುಮಾರಿ ಅದಿತಿ ಕಾರಂತ್ ಪ್ರಾರ್ಥನೆಗೈದರು. ಮುಖ್ಯ ಅಭ್ಯಾಗತರಾದ ರಾಮ ಭಟ್ಟ ಕೋಟೆ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರ ಗಣ್ಯರು ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಪಾಧ್ಯಕ್ಷರಾದ ರತ್ನಾಕರ ಮರಾಠೆ ನೆರೆದಿದ್ದ ಎಲ್ಲರನ್ನು ಸ್ವಾಗತಿಸಿದರು . ಕಾರ್ಯದರ್ಶಿ ಬಾಲಕೃಷ್ಣ ರಾವ್ ವಾರ್ಷಿಕ ವರದಿಯನ್ನು ಮಂಡಿಸಿದರು ಹಾಗೂ ಖಚಾಂಚಿಗಳಾದ ಕೇಶವ ಮರಾಠೆ ಲೆಕ್ಕಪತ್ರ ಮಂಡಿಸಿದರು ಹಾಗೂ ಇದನ್ನು ಸಭೆಯಲ್ಲಿ ಸರ್ವಾನುಮತದಿಂದ ಅನುಮೋದಿಸಲಾಯಿತು.

ಈ ಕಾರ್ಯಕ್ರಮದಲ್ಲಿ 15ಮಕ್ಕಳಿಗೆ ಕಲಿಕಾ ಪುರಸ್ಕಾರವನ್ನು ಕಾರ್ಯಕ್ರಮದ ಪ್ರಾಯೋಜಕ ಜನಾರ್ಧನ್ ಇಡ್ಯಾ ಹಸ್ತಾಂತರಿಸಿದರು .

ಹಿರಿಯ ದಂಪತಿ ವಿಭಾಗದಲ್ಲಿ ಜನಾರ್ಧನ ಇಡ್ಯಾ ಹಾಗೂ ಜ್ಯೋತ್ಸ್ನಾ ಇಡ್ಯಾ , ಅಧ್ಯಾಪಕ ವೃತ್ತಿಯಲ್ಲಿ ಗಜಾನನ ಮರಾಠೆ, ಪಾಕಶಾಸ್ತ್ರ ವಿಭಾಗದಲ್ಲಿ ಸುರೇಶ್ ಮರಾಠೆ , ವೃತ್ತಿ ಸೇವೆಯಲ್ಲಿ ಪ್ರಶಾಂತ ಬೆಳಿರಾಯ , ಕ್ರೀಡೆಯಲ್ಲಿ ಪೆರ್ಡೂರು ಪದ್ಮನಾಭ ಭಂಡಿ, ಸಂಗೀತದಲ್ಲಿ ಡಾ. ಕೌಸ್ತುಭ ರಾವ್, ತಾಳಮದ್ದಳೆಯಲ್ಲಿ ರಾಮ ಭಟ್ಟ ಕೋಟೆ, ಪೌರೋಹಿತ್ಯ ವಿಭಾಗದಲ್ಲಿ ವೆಂಕಟರಾಜ ಜೋಯಿಸ ಹಾಗೂ ವಿಶೇಷ ಸಾಧಕರಾದ ಅನ್ವಿತಾ ಮುಗೆರಾಯ, ಸುಚೇತನ , ಸತೀಶ್ ರಾವ್ ಕರ್ವಾಲು, ದೀಪ್ತಿ ವೆಲಂಕರ್, ಅದಿತಿ ಕಾರಂತ್ ಹಾಗೂ ಸೃಜನ ಚೀಪಲೂಣಕರ್ ಇವರುಗಳನ್ನೂ ಗೌರವಪೂರ್ವಕವಾಗಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೋಟೆ ರಾಮ ಭಟ್ಟ ಶುಭ ಹಾರೈಸಿ, ಬ್ರಾಹ್ಮಣತ್ವದ ಉಳಿವಿನ ಹಾಗೂ ಒಗ್ಗಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ವಿಸ್ತಾರವಾಗಿ ಸಭಿಕರಿಗೆ ವಿವರಿಸಿದರು .

ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಘ ಇದರ ಅಧ್ಯಕ್ಷ ಸೌಜನ್ಯ ಉಪಾಧ್ಯಾಯ ಮಾತನಾಡುತ್ತಾ ಕಾರ್ಕಳ ತಾಲೂಕಿನ ಎಲ್ಲಾ ತ್ರಿಮತಸ್ತ ವಿಪ್ರ ಬಂಧುಗಳು ಒಟ್ಟಾಗಿ ಸೇರಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಇತರ ಬ್ರಾಹ್ಮಣ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು .ಕಾರ್ಯದರ್ಶಿ ಬಾಲಕೃಷ್ಣ ರಾವ್ ಧನ್ಯವಾದ ಸಮರ್ಪಿಸಿದರು.

ರಮೇಶ್ ರಾವ್, ಶಾರ್ವರಿ ಉಪಾಧ್ಯಾಯ ಹಾಗೂ ಅನುರಾಧ ಉಡುಪ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9:30 ರಿಂದ 12:30 ರವರೆಗೆ ಕಾರ್ಕಳ ಟಿ ಎಮ್ ಎ ಪೈ ರೋಟರಿ ಆಸ್ಪತ್ರೆ ವೈದ್ಯರ ತಂಡದಿಂದ ನೆರೆದಿದ್ದ ವಿಪ್ರ ಬಂಧುಗಳಿಗೆ ಉಚಿತ ಅರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನು ಅಯೋಗಿಸಲಾಗಿತ್ತು,

ಅನುರಾಧ ಉಡುಪ ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಕೌಸ್ತುಭ ರಾವ್ ವೀಣಾವಾದನ, ಶ್ರೀಕರ ನಾರಾಯಣ ವೇಣುವಾದನ ಹಾಗೂ ಅನ್ವಿತ ಮುಗೆರಾಯ ಭರತನಾಟ್ಯ ಪ್ರದರ್ಶನ ನಡೆಸಿದರು.

ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top