ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆ ನೂತನ ಅಧ್ಯಕ್ಷರಾಗಿ ವೃಷಭರಾಜ ಕಡಂಬ ಆಯ್ಕೆ
RB NEWS
Bureau Report
ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆ ನೂತನ ಅಧ್ಯಕ್ಷರಾಗಿ ವೃಷಭರಾಜ ಕಡಂಬ ಆಯ್ಕ
ಕಾರ್ಕಳ, ಮೇ 15 : ಕಾರ್ಕಳ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ವೃಷಭರಾಜ ಕಡಂಬ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 15ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಜನಜಾಗೃತಿ ವೇದಿಕೆಯ ತ್ರೈಮಾಸಿಕ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ವೃಷಭರಾಜ ಕಡಂಬ ಅವರು ಸಮಾಜಮುಖಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಜೇಸಿಐ ಕಾರ್ಕಳದ ಪೂರ್ವಾಧ್ಯಕ್ಷರಾಗಿ, ಜೇಸಿ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕರಾಗಿ, ಶ್ರೀ ದುರ್ಗಾಪರಮೇಶ್ವರಿ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಶತಮಾನ ಕಂಡ ಶ್ರೀ ದುರ್ಗಾ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹಾಗೂ ಜೋಡುರಸ್ತೆ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉದಯ್ ಕುಮಾರ್ ಹೆಗ್ಡೆ ವಹಿಸಿದ್ದರು. ಮಾಜಿ ಅಧ್ಯಕ್ಷ ಕಮಲಾಕ್ಷ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು 2026-27ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಕ್ರಿಯಾ ಯೋಜನೆ, ನವಜೀವನ ಸಮಿತಿ ಬಲವರ್ಧನೆ ಹಾಗೂ ಮದ್ಯವರ್ಜನ ಶಿಬಿರ “ಸ್ವಾಸ್ತ್ಯ ಸಂಕಲ್ಪ” ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕಾರ್ಕಳ ತಾಲೂಕಿನ ವಲಯ ಮೇಲ್ವಿಚಾರಕರು ಜನಜಾಗೃತಿ ಸಾಧನಾ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕಮಲಾಕ್ಷ ನಾಯಕ್, ತ್ರಿವಿಕ್ರಮ ಕಿಣಿ, ಹರಿಶ್ಚಂದ್ರ ತೆಂಡುಲ್ಕರ್, ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ವಲಯ ಕಾರ್ಯದರ್ಶಿಗಳಾದ ಗೀತಾ, ಯಶೋಧ, ಸುಶೀಲಾ, ಬ್ರಿಜೇಶ್, ಶಿವರಾಮ್, ಕಚೇರಿ ಆಡಳಿತ ಪ್ರಬಂಧಕಿ ಸೌಮ್ಯ ಉಪಸ್ಥಿತರಿದ್ದರು. ಕ್ಷೇತ್ರ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ವರದಿ ವಾಚಿಸಿದರು. ವಲಯ ಮೇಲ್ವಿಚಾರಕ ಗಿರೀಶ್ ಸ್ವಾಗತಿಸಿದರು. ದಿನೇಶ್ ವಂದಿಸಿದರು.