ಕಾರ್ಕಳ ತಾಲೂಕು ಗಮಕ ಸಮ್ಮೇಳನ
ಕಾರ್ಕಳ: ಕಾರ್ಕಳ ತಾಲೂಕು ಗಮಕ ಸಮ್ಮೇಳನ ಡಿ.೨೮ ರಂದು ನಗರದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಲಿರುವುದು.
ಕರ್ನಾಟಕ ಗಮಕ ಕಲಾ ಪರಿಷತ್ತ್ ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತ್ ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ಘಟಕದ ಮೂಲಕ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ.
ವ್ಯಾಖ್ಯಾನಕಾರ ಮುನಿರಾಜ್ ರೆಂಜಾಳ ಸಮ್ಮೇಳನಾಧ್ಯಕ್ಷತೆವಹಿಸಲಿದ್ದಾರೆ.
ಕರ್ನಾಟಕ ಗಮಕ ಕಲಾ ಪರಿಷತ್ತ್ನ ಅಧ್ಯಕ್ಷ ಡಾ. ಎ.ವಿ.ಪ್ರಸನ್ನ, ಕರ್ನಾಟಕ ಗಮಕ ಕಲಾ ಪರಿಷತ್ತ್ ಉಡುಪಿ ಜಿಲ್ಲೆ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ಕರ್ನಾಟಕ ಗಮಕ ಪರಿಷತ್ತ್ ಕಾರ್ಕಳ ಘಟಕದ ಕಾರ್ಯದರ್ಶಿಗಳಾದ ಎಚ್.ಕೆ.ಗಣಪಯ್ಯ, ಮಾಧವ ಭಟ್ ಪಿ ಉಪಸ್ಥಿತರಿರುವರು.
ಕಾರ್ಕಳ ಶ್ರೀ ವ್ಯಾಸ ರಘಪತಿ ಸಂಸ್ಕೃತ ವಿದ್ಯಾಶಾಲಾ ಫಂಡ್ನ ಅಧ್ಯಕ್ಷ ಎ.ಯೋಗೀಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಉಪನ್ಯಾಸಕ ರಾಮಭಟ್ ಎಸ್ ಶಿಬಿರದ ಉಪನ್ಯಾಸ ನೀಡಲಿದ್ದಾರೆ.
ಅತಿಥಿಗಳಾಗಿ ಕಮಲಾಕ್ಷ ಕಾಮತ್, ನಿತ್ಯಾನಂದ ಪೈ, ಭಾಸ್ಕರ್, ಅನುಪಮಾ ದೇವಿ ಚಿಪ್ಲೂಣ್ಕರ್, ಆರ್.ನಾರಾಯಣ ಶೆಣೈ ಪಾಲ್ಗೊಳ್ಳಲಿದ್ದಾರೆ.
ಡಾ. ನಾರಾಯಣ ಶೇಡಿಕಜೆ ಸನ್ಮಾನ ಸ್ವೀಕರಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಡಾ.ಅರುಣ ಕುಮಾರ್ ಎಸ್.ಆರ್, ಮಣಿರಾಜ್ ಶೆಟ್ಟಿ, ನರೇಂದ್ರ ಕಾಮತ್ ಭಾಗವಹಿಸಲಿದ್ದಾರೆ.
ಈ ನಡುವೆ ಗಮಕ ವಾಖ್ಯಾನ ಸಾವಿತ್ರಿಯ ಬಾಲ್ಯ, ಕರ್ಣ ಬೇಧನ, ಗೋಷ್ಠಿ-೧ ಕಾವ್ಯೋಲ್ಲಾಸ, ಗಮಕ-ದೃಶ್ಯ ರೂಪಕ, ಗಮಕ ವಾಚನ-ವಾಖ್ಯಾನ ಊರ್ವಶಿಯ ಪ್ರಣಯ ಪ್ರಸಂಗ ಜರುಗಲಿದೆ.





































