
ಕಾರ್ಕಳ ತಾಲೂಕು ಕಟ್ಟಡ ಕಾರ್ಮಿಕರ ಸಂಘ(ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆ
ಕಾರ್ಕಳ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ರಾಜ್ಯಾದ್ಯಂತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಯಿತು.
ಕಾರ್ಕಳ ತಾಲೂಕು ಕಟ್ಟಡ ಕಾರ್ಮಿಕರ ಸಂಘ(ಸಿಐಟಿಯು) ನೇತೃತ್ವದಲ್ಲಿ ಕಾರ್ಕಳ ತಾಲೂಕು ಕಛೇರಿಯಲ್ಲಿ ಉಪ ತಹಶೀಲ್ದಾರ್ ಮಂಜುನಾಥ ನಾಯಕ್ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಕಾರ್ಕಳ ಕಟ್ಟಡ ಸಂಘದ ಮುಖಂಡರಾದ ಶೇಖರ್ ಕುಲಾಲ್, ರತ್ನಾಕರ್ ಪೂಜಾರಿ,ಸತೀಶ್ ನಾಯಕ್,ಸುರೇಶ್ ಕುಮಾರ್,ಹರೀಶ್ ದೇವಾಡಿಗ, ಸುರೇಂದ್ರ ರಾವ್, ಶ್ರೀನಿವಾಸ್ ನಾಯಕ್, ಸುಧಾಕರ್ ಪೂಜಾರಿ,ಸತೀಶ್ ನಾಯಕ್,ಪ್ರಕಾಶ್.ಪಿ,ನಿತ್ಯಾನಂದ ,ಹರೀಶ್,ರತ್ನಾಕರ ಮುಡಾರ್,ಪುಷ್ಪ. ಪಿ,ಹಾಗೂ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ, ಸಿಐಟಿಯು ಸಂಚಾಲಕಿ ಸುನೀತಾ ಶೆಟ್ಟಿ ಉಪಸ್ಥಿತರಿದ್ದರು.








































