ಕಾರ್ಕಳ ತಹಶೀಲ್ದಾರ್ ಕಚೇರಿ ಏರುಧ್ವನಿ ವಿಡಿಯೋ ವೈರಲ್!

Picture of RB NEWS

RB NEWS

Bureau Report


ಕಾರ್ಕಳ: ಕಾರ್ಕಳ ತಹಶೀಲ್ದಾರ್ ಕಚೇರಿಯ ಹೊರಾಂಗಣದಲ್ಲಿ ಏರುಧ್ವನಿಯಲ್ಲಿ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸಜಿತ್ ಶೆಟ್ಟಿ ಶಿರ್ಲಾಲು ಈ ಸುದ್ದಿಯ ಕೇಂದ್ರ ಬಿಂದು.
ಇವರು ಖುದ್ದಾಗಿ ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಫೋಟೋ ಹರಿಬಿಟ್ಟು, ಕಾರ್ಕಳ ತಾಲೂಕು ಆಡಳಿತ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ನಡೆದಿರುವುದೇನು?


ಮೇ 22ರಂದು ಈ ಘಟನೆ ನಡೆದಿದೆ. ಆರ್‌ಟಿಸಿ ಕಾಪಿ ಪಡೆಯಲೆಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಜಿತ್ ಶೆಟ್ಟಿ ಶಿರ್ಲಾಲು ಅವರು ತಾಲೂಕು ಕಚೇರಿಗೆ ಹೋಗಿದ್ದರು.
ಅರ್ಜಿ ಸಲ್ಲಿಸಿದ್ದರೂ ಅವರಿಗೆ ಆರ್‌ಟಿಸಿ ಕಾಪಿ ಕೈಸೇರದೇ ಸಂಜೆ ವರೆಗೆ ಕಾದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಕಂಡುಬoದಿರುವoತೆ ಮಧ್ಯಾಹ್ನ 2 ಗಂಟೆಯಿAದ ಕಾಯುತ್ತಿದ್ದೇನೆ. ಸಂಜೆ 4.30ಕ್ಕೆ ಓಪನ್ ಮಾಡುತ್ತಾರೆ. ಯಾವುದೇ ಒಂದು ಆರ್‌ಟಿಸಿ ಕೊಡುತ್ತಿಲ್ಲ. ರಾಜ್ಯ ಸರಕಾರ ಇದೆಯೋ ಇಲ್ಲವೋ, ಯಾರು ಕೇಳುವಾಗೇ ಇಲ್ಲವೋ? ಕಾರ್ಕಳ ತಾಲೂಕು ಕಚೇರಿ ಬ್ರೋಕರ್‌ಗಳಾದಾ? ನಾನು ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಂತ ಏರುಧ್ವನಿಯಲ್ಲಿ ಮಾತನಾಡಿದ್ದಾರೆ.
ಅದೇ ಸಂದರ್ಭದಲ್ಲಿ ಅಲ್ಲಿಗೆ ತಹಶೀಲ್ದಾರ್ ಪ್ರದೀಪ್ ಆರ್ ಅಗಮಿಸುತ್ತಾರೆ.
ಅವರಲ್ಲಿ ಸುಜಿತ್ ಶೆಟ್ಟಿ ತಾನು ಬೆಳಿಗ್ಗಿನಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ಅಗ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪ್ರದೀಪ್ ಆರ್ ಅವರು ನಿಧಾನವಾಗಿ ಮಾತನಾಡಿ. ಕುರುಚಬೇಡಿ ಎನ್ನುತ್ತಾರೆ.
ಡಿ.ಸಿ.ಅವರಲ್ಲಿ ನಿಮ್ಮಲ್ಲಿ ಮಾತನಾಡಿದ್ದಾರೆ. ಓಪನ್ ಇದೇ ಅನ್ನುತ್ತಾರೆ ಅನ್ನುತ್ತೀರಿ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಜಿತ್ ಶೆಟ್ಟಿ ತಿಳಿಸುತ್ತಾರೆ.
ಕಿರುಚಾಡಲು ಏನು ಆಗಿಲ್ಲ. ವೈದ್ಯಕೀಯ ಪರೀಕ್ಷೆ ಒಳಪಡಿಸಬೇಕಾಗಿತ್ತು. ನಿಮ್ಮಿಂದ ಜೋರು ನನಗೂ ಮಾತನಾಡಲು ಬರುತ್ತದೆ. ಕುಡಿದು ಬಂದು ಏನೇನೋ ಮಾತನಾಡುವುದಲ್ಲ. ಇಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಎಂದು ತಹಶೀಲ್ಧಾರ್ ಪ್ರದೀಪ್ ಪ್ರತಿಕ್ರಿಯೆ ನೀಡುತ್ತಾರೆ.
ಅದಕ್ಕೆ ಪ್ರತಿಯಾಗಿ ಮಾತನಾಡಿದ ಸುಜಿತ್ ಶೆಟ್ಟಿ ನಾನು ಲೈಫಲಿ ನಾನು ಕುಡಿದಿಲ್ಲ. ಏನು ಬೇಕಾದರೂ ಮಾಡಿ ಎನ್ನುತ್ತಾರೆ.
ಪ್ರತಿಯಾಗಿ ಮಾತನಾಡಿದ ತಹಶೀಲ್ದಾರ್ ಹುಚ್ಚುಚ್ಚಾಗಿ ಮಾತಡಬೇಡಿ.ಕುಡಿದು ಬಂದಿದ್ದೀರಾ? ಅಂತ ಮರು ಸಾವಾಲು ಹಾಕಿ ಡಾಕ್ಟರ್ ಅವರತ್ರ ಚೆಕ್ ಮಾಡಿಸುತ್ತೇನೆ ಅನ್ನುತ್ತಾ ಪೊಲೀಸ್ ಇಲಳಾಖೆ ಕರೆ ಮಾಡುತ್ತಿರುವ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ.

ಗುಡುಗು,ಸಿಡಿಲಿನಿಂದಾಗಿ ಕಂಪ್ಯೂಟರ್ ಆಫ್
ಮೇ 20ರಂದು ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಮುಂಗಾರು ಪೂರ್ವದಲ್ಲಿ ಗುಡುಗು,ಸಿಡಿಲು ಹಾಗೂ ಭಾರೀ ಮಳೆ ಸುರಿದಿತ್ತು.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಇದೇ ತರದಲ್ಲಿ ಗುಡುಗು,ಸಿಡಿಲು ಹಾಗೂ ಮಳೆಯಿಂದಾಗಿ ಕಾರ್ಕಳ ತಾಲೂಕು ಕಚೇರಿಯ ಕಂಪ್ಯೂಟರ್ ಹಾನಿಗೊಳಗಾಗಿ ರೂ.7 ಲಕ್ಷ ನಷ್ಟ ಸಂಭವಿಸಿತ್ತು. ನಿರ್ವಹಣೆದಾರರ ಸೂಚನೆಯಂತೆ ನಂತರದಿನಗಳಲ್ಲಿ ಕಂಫ್ಯೂಟರ್ ಆಫ್ ಮಾಡಲಾಗುತ್ತಿದೆ ಎಂದು ತಾಲೂಕು ಕಚೇರಿ ಮೂಲಗಳಿಂದ ತಿಳಿದುಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top