[t4b-ticker]

ಕಾರ್ಕಳ : ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ – ಉಚಿತವಾಗಿ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷಾ ಶಿಬಿರ

Picture of RB NEWS

RB NEWS

Bureau Report

ಆಸ್ಟಿಯೊಪೊರೋಸಿಸ್/ಅಸ್ಥಿರಂಧ್ರತೆ ಕಾಯಿಲೆಯನ್ನು ತಡೆಯಲು ಮೂಳೆ ಸಾಂದ್ರತೆ ಪರೀಕ್ಷೆ ಅಗತ್ಯ ಎಂದು ತಜ್ಞರ ಅಭಿಪ್ರಾಯ

ಕಾರ್ಕಳ, 25 : ಮೂಳೆಗಳನ್ನು ದುರ್ಬಲಗೊಳಿಸುವ ಮತ್ತು ಮುರಿತದ ಅಪಾಯವನ್ನು ಹೆಚ್ಚಿಸುವ ಸ್ಥಿತಿಯಾದ ಆಸ್ಟಿಯೊಪೊರೋಸಿಸ್, ಅದರ ಬಗ್ಗೆ ಅರಿವಿನ ಕೊರತೆಯಿಂದಾಗಿ ಪತ್ತೆಯಾಗುವುದೇ ಇಲ್ಲ. ಇದು ಪ್ರಧಾನವಾಗಿ ಋತುಬಂಧಕ್ಕೊಳಗಾದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ಹೆಚ್ಚುವುದನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯವು ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಸುನಿಲ್ ಬಾಳಿಗ, ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ, ಅವರು ಆಸ್ಟಿಯೊಪೊರೋಸಿಸ್ ತೊಂದರೆಯನ್ನು ಪತ್ತೆಹಚ್ಚುವಲ್ಲಿ ಬೋನ್ ಮಿನರಲ್ ಡೆನ್ಸಿಟಿ (BMD) ಪರೀಕ್ಷೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ದೇಹವು ಹೊಸ ಮೂಳೆಗಳನ್ನು ಸಮರ್ಪಕವಾಗಿ ರೂಪಿಸಲು ವಿಫಲವಾದಾಗ ಅಥವಾ ಅಸ್ತಿತ್ವದಲ್ಲಿರುವ ಮೂಳೆಗಳ ನಾಶ ಹೆಚ್ಚಾದಾಗ ಆಸ್ಟಿಯೊಪೊರೋಸಿಸ್ ಸಂಭವಿಸುತ್ತದೆ. ಯಾವುದೇ ನೋವು – ಗಾಯ ಇಲ್ಲದೇ ಮಾಡುವ ಬಿಎಂಡಿ ಪರೀಕ್ಷೆಗೆ ಒಳಗಾಗುವ ಮೂಲಕ, ವ್ಯಕ್ತಿಗಳು ತಮ್ಮ ಮೂಳೆಗಳ ಸಾಂದ್ರತೆಯನ್ನು ಕಂಡು ಹಿಡಿಯಬಹುದು ಮತ್ತು ಸ್ಥಿತಿಯನ್ನು ನಿರ್ವಹಿಸುವಲ್ಲಿ ಸೂಕ್ತ ಮಾರ್ಗದರ್ಶನವನ್ನು ಪಡೆಯಬಹುದು.

ಆರಂಭಿಕ ಪತ್ತೆಯ ಮಹತ್ವವನ್ನು ತಿಳಿಸಲು ಮತ್ತು ಮೂಳೆಯ ಆರೋಗ್ಯವನ್ನು ಉತ್ತೇಜಿಸಲು, ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳವು ಸೋಮವಾರ, 26 ಫೆಬ್ರವರಿ 2024 ರಂದು ಮೂಳೆ ಮತ್ತು ಕೀಲು ವಿಭಾಗದಲ್ಲಿ ಉಚಿತ ಬೋನ್ ಮಿನರಲ್ ಡೆನ್ಸಿಟಿ ಶಿಬಿರವನ್ನು ಬೆಳಗ್ಗೆ ಗಂಟೆ 9:00 ರಿಂದ ಮಧ್ಯಾಹ್ನ ಗಂಟೆ 3:00 ರ ವರೆಗೆ ಆಯೋಜಿಸುತ್ತಿದೆ. ಶಿಬಿರದಲ್ಲಿ 35 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು , ವಿಶೇಷವಾಗಿ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದು. ಇದು ಮೊದಲು ನೋಂದಾಯಿಸುವ 120 ವ್ಯಕ್ತಿಗಳಿಗೆ ಸೀಮಿತವಾಗಿದೆ, ನೋಂದಣಿಯು ಮೊದಲು ಬಂದವರಿಗ ಮೊದಲ ಆದ್ಯತೆ ಆಧಾರದ ಮೇಲೆ ಇರುತ್ತದೆ. ನೋಂದಣಿಗಾಗಿ 9731601150/08258-230583 ಅನ್ನು ಸಂಪರ್ಕಿಸಬಹುದು ಎಂದು ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.

ಶಿಬಿರದ ವಿವರಗಳು:
ದಿನಾಂಕ: 26ನೇ ಫೆಬ್ರವರಿ 2024
ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 3
ಸ್ಥಳ: ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದ ಮೂಳೆ ಮತ್ತು ಕೀಲು ವಿಭಾಗ
ಅರ್ಹತೆ: 35 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ: 08258-230583/9731601150

ಡಾ. ಕೀರ್ತಿನಾಥ ಬಲ್ಲಾಳ
ಮುಖ್ಯ ವೈದಾಧಿಕಾರಿ , ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top