ಕಾರ್ಕಳ : ಬೇಸಿಗೆಯಲ್ಲಿ ಪ್ರತಿಯೊಬ್ಬರು ತಮ್ಮ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಪೌಷ್ಟಿಕ ಆಹಾರದ ಜೊತೆ ಸಾಕಷ್ಟು ನೀರನ್ನು ಕುಡಿಯಬೇಕು. ವಿಶ್ವ ಅರೋಗ್ಯ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವದಾಧ್ಯoತ ಆಚರಿಸಲಾಗುತ್ತದೆ. ಈ ವರ್ಷದ ಧ್ಯೆಯ ವಾಕ್ಯ ನನ್ನ ಆರೋಗ್ಯ, ನನ್ನ ಹಕ್ಕು. ಎಲ್ಲರಿಗೂ ಉತ್ತಮ ಆರೋಗ್ಯ ನೀಡುವುದು ಮತ್ತು ಸಮುದಾಯದಿಂದ ಪಡೆದುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದು
ಹಿರಿಯ ಮಕ್ಕಳ ತಜ್ಯ ಡಾ ಆಶಾ ಪಿ ಹೆಗ್ಡೆ ಹೇಳಿದರು.
ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ರೋಟರಿ ಕ್ಲಬ್ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ , ಲಯನ್ಸ್ ಕ್ಲಬ್ ಕಾರ್ಕಳ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ, ಜೆಸಿಐ ಕಾರ್ಕಳ ಇವರ ಸಹಯೋಗದೊಂದಿಗೆ ಆಯೋಜಿಸಿದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಹಿರಿಯ ರೋಟರಿ ಸದಸ್ಯ ರೋಟರಿಯನ್ ತುಕಾರಾಮ್ ನಾಯಕ್, ರೋಟರಿ, ಲಯನ್ಸ್, ಜೆಸಿಐ ಕ್ಲಬ್ ನ ಅಧ್ಯಕ್ಷರುಗಳಾದ ರೋಟರಿಯನ್ ಸುರೇಶ್ ನಾಯಕ್, ಲಯನ್ ಜ್ಯೋತಿ ರಮೇಶ್, ಲಯನ್ ಸಚಿoದ್ರ ಶೆಟ್ಟಿ, ಜೆಸಿ ಪ್ರಚಿತ್ ಕುಮಾರ್, ಹಿರಿಯ ನೇತ್ರ ತಜ್ಞ ಡಾ ಚಿದಾನಂದ ಕುಲಕರ್ಣಿ, ಆಸ್ಪತ್ರೆಯ ಸಿಬ್ಬಂದಿ ಮತ್ತಿತರು ಉಪಸ್ಥಿತರಿದ್ದರು






































