ಕಾರ್ಕಳ ಗ್ರಾ. ಠಾಣಾಧಿಕಾರಿಯಾಗಿ ಪ್ರಸನ್ನ ಎಂ.ಎಸ್
ಕಾರ್ಕಳ : ಪಡುಬಿದ್ರಿ ಠಾಣಾಧಿಕಾರಿಯಾಗಿದ್ದ ಪ್ರಸನ್ನ ಎಂ.ಎಸ್ ಅವರನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ವರ್ಗಾವಣೆಗೊಳಿಸಿ ಇಲಾಖೆ ಅದೇಶ ಹೊರಡಿಸಿದೆ.
ಕಾರ್ಕಳ ನಗರ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಜನಸ್ನೇಹಿ ಎಸ್ .ಐ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅವರು ಪಡುಬಿದ್ರಿ ಠಾಣೆಗೆ ವರ್ಗಾವಣೆಗೊಂಡಿದ್ದರು.
ಈ ನಡುವೆ ಅವರ ಕರ್ತವ್ಯ ನಿಷ್ಠೆಗೆ ಮುಖ್ಯಮಂತ್ರಿಯಿಂದ ಪದಕ ಗೌರವ ಪ್ರಶಸ್ತಿಗೂ ಪಾತ್ರರಾಗಿದ್ದರು.
ಇದೀಗ ಅವರು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.




































