ಕಾರ್ಕಳ ಕೋಟೆ ಮಾರಿಪೂಜೆ ಸಂಪನ್ನ

Picture of RB NEWS

RB NEWS

Bureau Report

ಕಾರ್ಕಳ ಕೋಟೆ ಮಾರಿಪೂಜೆ ಸಂಪನ್ನ


ಕಾರ್ಕಳ : ವಿಜಯನಗರದ ಕಾಲಘಟ್ಟದಲ್ಲಿ ಇಕ್ಕೇರಿ ರಾಜನ ಆಳ್ವಿಕೆಯಲ್ಲಿ ರಾಜ್ಯಭಾರದ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದವರು ರಾಮಕ್ಷತ್ರಿಯ ಜನಾಂಗದವರು.
ಅದೇ ರೀತಿಯಲ್ಲಿ ರಣವೀರರೂ, ಮರಾಠ ಕ್ಷತ್ರಿಯ, ಹೆಗ್ಡೆ ಸಮುದಾಯದವರು ಒಳಗೊಂಡಿದ್ದಾರೆ.
ರಾಮಕ್ಷತ್ರಿಯ ಜನಾಂಗದವರು ಕೋಟೆಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿ ಇದ್ದುದರಿಂದ ಅವರನ್ನು ಕೋಟೆಯವರು ಕರೆಯುವ ಚಾಲ್ತಿಗೆ ಬಂತು.
ರಾಮಕ್ಷತ್ರಿಯ ಅಥವಾ ಕೋಟೆಯವರು ಆರಾಧಿಸಿಕೊಂಡು ಬಂದ ದೇವರಲ್ಲಿ ಪ್ರಮುಖವಾಗಿ ಮಾರಿಯಮ್ಮ, ಆಂಜನೇಯ, ಶಿವ, ದೇವಿ, ದುರ್ಗಪರಮೇಶ್ವರಿ ಒಳಗೊಂಡಿದೆ.
ಕಾರ್ಕಳ ಕೋಟೆ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿ ಇದ್ದ ರಾಮಕ್ಷತ್ರಿಯ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿದ್ದ ಶ್ರೀ ಮಾರಿಯಮ್ಮ ದೇವರು ಆ ಮನೆ ಮಂದಿಯ ಮನೆ ದೇವರೂ ಕೂಡಾ ಆಗಿದೆ. ಅದೇ ಕಾರಣದಿಂದಾಗಿ ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ವೂ ಸರಕಾರದ ಆಡಳಿತಕ್ಕೆ ಒಳಪಡುತ್ತಿದ್ದರೂ ಪ್ರಸ್ತುತ ದಿನದ ವರೆಗೆ ದೇವಸ್ಥಾನದ ಮೊಕ್ತೇಸರರ ಹುದ್ದೆ ಅನುವಂಶಿಕವಾಗಿ ರಾಮಕ್ಷತ್ರಿಯ ಸಮಾಜದ ವಂಶಸ್ಥರಲ್ಲಿ ಮುಂದುವರಿಯುತ್ತಾ ಬಂದಿರುವುದು ಗಮನಾರ್ಹವಾಗಿದೆ.
ಕೋಟೆಗಳು ಎಲ್ಲಿಲ್ಲಿ ಇದೆಯೋ ಅಲ್ಲಲ್ಲಿ ಮಾರಿಯಮ್ಮನ ಹಾಗೂ ಆಂಜನೇಯನ ದೇವಸ್ಥಾನಗಳು ಇರುತ್ತದೆ. ಕ್ಷತ್ರಿಯ ಜನಾಂಗದವರು ದೈನಂದಿನಗಳಲ್ಲಿ ಮಾರಿಯಮ್ಮ ಹಾಗೂ ಆಂಜನೇಯ ದೇವರನ್ನು ಆರಾಧಿಸುತ್ತಿದ್ದರು.‌

ಕಾರ್ಕಳ ಶ್ರೀ ಮಾರಿಯಮ್ನ ದೇವರ ಎದುರಿನಲ್ಲಿ ಪ್ರತಿಷ್ಠಾಪನೆ ಗೊಂಡಿರುವುದು ಉಚ್ಚಂಗಿ ಮಾರಿಯಮ್ಮ. ರಣವೀರರು ಅಥವಾ ರಾಣೆಯರ ಸಮಾಜದವರು ಕುಲ ದೇವರನ್ನಾಗಿ ಆರಾಧಿಸುತ್ತಾ‌ ಬಂದವರು.

ಮಾರಿಯಮ್ಮ ದೇವಸ್ಥಾನ ಇದ್ದಲ್ಲಿ ಅದರ ಎದುರುಗಡೆ ಉಚ್ಚಂಗಿ ದೇವಿಯನ್ನು ಪ್ರತಿಷ್ಠಾಪಿಸುವ ಕ್ರಮವೂ ಇದೆ. ಧಾರ್ಮಿಕ ಪ್ರಕಾರ ಮಾರಿಯಮ್ಮ ದೇವಿಯ ತಂಗಿಯೇ ಉಚ್ಚಂಗಿ ಮಾರಿಯಮ್ಮ ಎಂದು ಆಸ್ತಿಕ ಭಾಂದವರ ನಂಬಿಕೆಯೂ ಇದೆ.

ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುತ್ತಾ ಬಂದಿರುವ ಮಾರಿಪೂಜೆ ಅಥವಾ ಮಾರಿಹಬ್ಬದ ಸಂದರ್ಭದಲ್ಲಿ ಎಲ್ಲ ಜಾತಿಗಳಿಗೂ ಪ್ರಾತಿನಿಧ್ಯ ನೀಡಲಾಗುತ್ತದೆ. ಆಯಾಯ ಸಮುದಾಯದವರು ತಮ್ನ ಕರ್ತವ್ಯವನ್ನು ಸ್ವಯಂ ಪ್ರೇರಿತವಾಗಿ ಚಾಚು ತಪ್ಪದೇ ಪರಿಪಾಲಿಸಿಕೊಂಡು ಬರುತ್ತಿದ್ದು, ದೇವಸ್ಥಾನದ ಅನುವಂಶಿಕ ಆಡಳಿತದವರಯ ಎಲ್ಲ ಸಮಾಜದ ಪ್ರಮುಖರಿಗೆ ಗೌರವಿಸುತ್ತಾ ಬಂದಿದ್ದಾರೆ.

ಚಿತ್ರಗಳು: ಸತೀಶ್ ಕಾತ್ಯಾಯಿನಿ

ಡೋಲಿಗೆ ಪ್ರಮುಖ ಸ್ಥಾನ
ಪ್ರಾಚೀನ ಪರಂಪರೆಯಲ್ಲಿ ಡೋಲು ಬಡಿಸುವವರಿಗೆ ಧಾರ್ಮಿಕ ಹಿನ್ನಲೆಯಲ್ಲಿ ಪ್ರಮುಖ ಸ್ಥಾನವೂ ಇದೆ.
ಮಾರಿಹಬ್ಬದ ಸಂದರ್ಭದಲ್ಲಿ ಮೂರು ಮಾರ್ಗ ದಲ್ಲಿ ಮಾರಿಯಮ್ಮನನ್ನು ಕುಳಿರಿಸಿದರಿಂದ ಸಂಪನ್ನ ಗೊಳ್ಳುವ ತನಕ ಡೋಲು ಬಾರಿಸುವವರಿಗೆ ಗೌರವ ಸ್ಥಾನ ನೀಡಲಾಗುತ್ತದೆ.
ಮಾರಿಯಮ್ಮನನ್ನು ರಾಮಸಮುದ್ರ ಪರಿಸರದ ಕಾಡಿಗೆ ಬಿಡುವ ಮೆರವಣಿಗೆಯಲ್ಲಿ ಡೋಲು ಬಾರಿಸುವರು ಇದ್ದರೆ, ನಂತರದಲ್ಲಿ ಇತರ ವಾದ್ಯ ಬಾರಿಸುವವರು ಇರುತ್ತಾರೆ.

ದೇವರ ಪಾದ…
ದೇವರ ಪಾದವನ್ನು ತಲೆಮೇಲೆ ಹೊತ್ತು ಸಾಗುವವರು ರಾಣವೀರರು ಯಾ ರಾಣೆಯರು.
ದೇವರ ಪಾದ ಮುಂದಕ್ಕೆ ಹೋಗದೇ ಮಾರಿಯಮ್ಮನ ವಿಗ್ರಹವನ್ನು ಹೋಗಲಾರದು.
ಮಾರಿಯಮ್ಮನ ವಿಗ್ರಹವನ್ನು ಶೆಟ್ಟಿಗಾರ ಸಮಾಜದವರು ಹೊತ್ತು ಸಾಗುತ್ತಾರೆ.
ದೇವಸ್ಥಾನದಲ್ಲಿ ಅರ್ಚಕ ವರ್ಗದವರು ಮಹಾಪೂಜೆ ನೆರವೇರಿಸಿದ ಬಳಿಕ ಮಾರಿಯಮ್ಮನ ವಿಗ್ರಹವನ್ನು ಶೆಟ್ಟಿಗಾರ್ ಸಮಾಜದ ಹಿಡಿತದಲ್ಲಿ ಇರುತ್ತದೆ.

ಮೆರವಣಿಗೆ ಹೊರಡುವ ಮುನ್ನ ದೃಷ್ಠಿ ತೆಗೆಯುವ ವಿಧಿವಿಧಾನದ ಬಳಿಕ ಕುಂಬಳಕಾಯಿ ಕಡಿಯುತ್ತಾರೆ. ಮೆರವಣಿಗೆ ಸಾಗಿ ಬರುತ್ತಿದ್ದಂತೆ ಹೊಸ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಎದುರಿನಲ್ಲಿ ಕೋಳಿಬಲಿ ಕೊಡುತ್ತಾರೆ.

ಆ ಮೂಲಕ ನಾಡಿಗೆ ಯಾವುದೇ ರೀತಿಯಲ್ಲಿ ಸಂಕಷ್ಟಗಳು ಎದುರಾಗದಿರಲಿ ಎಂಬ ನಂಬಿಕೆ ನಾಸ್ತಿಕರದು ಆಗಿದೆ.

ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಿ ಸರ್ವ ಜನರಿಗೂ ರಕ್ಷಣೆ ನೀಡುತ್ತಾ ಬಂದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top