ಕಾರ್ಕಳ : ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಯಮಲೋಕಕ್ಕೆ ಕಳುಹಿಸಿದ ಬಸ್ ಚಾಲಕ


ಕಾರ್ಕಳ : ಬಡ್ಡಿ ವ್ಯವಹಾರ ನಡೆಸುತ್ತಿದ್ದ ನವೀನ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಯೊಳಗಾಗಿ ಬಂಧಿಸಿದ್ದಾರೆ.
ಮಂಗಳೂರು ಪಡೀಲು ನಿವಾಸಿ ನವೀನ್ ಪೂಜಾರಿಯನ್ನು ಕಾರ್ಕಳ ಕುಂಟಲ್ಪಾಡಿಯ ರಸ್ತೆ ಬದಿಯಲ್ಲಿ ಕೊಲೆಗೈಯಲಾಗಿದ್ದು, ಮಂಗಳವಾರ ನಸುಕಿನ ಜಾವದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.
ರಕ್ತದ ಮಡುವಿನಲ್ಲಿ ಮೃತ ದೇಹ ಪತ್ತೆಯಾಗಿದ್ದು, ದೇಹದ ಹಲವು ಕಡೆಗಳಿಗೆ ಚೂರಿ ಇರಿದಿದ್ದ ಗುರುತು ಪತ್ತೆಯಾಗಿತ್ತು. ಪಕ್ಕದಲ್ಲಿ ಮೃತ ವ್ಯಕ್ತಿಗೆ ಸೇರಿದ ದ್ವಿಚಕ್ರವಾಹನ ಪತ್ತೆಯಾಗಿತ್ತು.
ತನಿಖೆ ಚುರುಕುಗೊಳಿಸಿದ ಪೊಲೀಸರು
ಮೃತದೇಹ ಪತ್ತೆಯಾದ ಜಾಗದಲ್ಲಿ ಮೊಬೈಲ್ ಪತ್ತೆಯಾಗಿದ್ದು, ಅದು ನವೀಮ್ ಪೂಜಾರಿಗೆ ಸೇರಿದಾಗಿದೆ.
ಕರೆಗಳ ವಿವರಗಳ ನೋಡಿದಾಗ ಕೊಲೆಗೀಡಾದ ನವೀನ್ ಪೂಜಾರಿಗೆ ಕೊನೆಯಕರೆಯು ಆತನ ಸ್ನೇಹಿತ ಬೆಳ್ತಂಗಡಿಯ ಪರೀಕ್ಷಿತ್ ಗೌಡನಿಗೆ ಸೇರಿದಾಗಿತ್ತು. ಖಾಸಗಿ ಬಸ್ಸು ಚಾಲಕನಾಗಿದ್ದ ಆತ, ನವೀನ್ ಪೂಜಾರಿಗೆ ಚೂರಿ ಇರಿದು ಕೊಲೆಗೈದಿದ್ದನೆಂಬ ವಿಚಾರವು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಸೋಮವಾರ ಎಂದಿನಂತೆ ಕೊಲೆಗೀಡಾದ ನವೀನ್ ಪೂಜಾರಿ ಹಾಗೂ ಆರೋಪಿ ಪರೀಕ್ಷಿತ್ ಗೌಡ ನಿಟ್ಟೆಯ ದೂಪದ ಕಟ್ಟೆ ಬಾರ್ ನಲ್ಲಿ ಕಂಠಪೂರ್ತಿ ಮದ್ಯ ಸೇವನೆಗೈದಿದ್ದಾರೆ.

ಆರೋಪಿ ಪರೀಕ್ಷಿತ್ ಗೌಡ ಹಾಗೂ ಕೊಲೆಗೀಡಾದ ನವೀನ್ ಪೂಜಾರಿ
———————————————————————————————————————————————
ಮದ್ಯದ ನಶೆ ಏರುತ್ತಿದ್ದಂತೆ ಅವರಿಬ್ಬ ನಡುವೆ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿತ್ತಲ್ಲದೇ ಜಗಳವೂ ನಡೆದಿತ್ತಂತೆ. ಅದರ ಮುಂದುವರಿದ ಭಾಗವೇ ನವೀನ್ ಹತ್ಯೆಗೆ ನಿಗದಿ ಪಡಿಸಿದ ಪರೀಕ್ಷಿತ್ ಗೌಡ ಆನೆಕೆರೆಯ ಬಾರಿಗೆ ಬರುವಂತೆ ತಾಕೀತು ಮಾಡಿದ್ದಾನೆ.
ಪರೀಕ್ಷಿತ್ ಗೌಡನ ಮಾತಿಗೆ ಕ್ಯಾರೇ ಅನ್ನದ ನವೀನ್ ಪೂಜಾರಿ ಆನೆಕೆರೆಯ ಬಳಿಗೆ ದ್ವಿಚಕ್ರ ವಾಹನ ದಲ್ಲಿ ತೆರಳಿದ್ದಾರೆ.
ಕುಂಟಲ್ಪಾಡಿ ಬಸ್ ನಿಲ್ದಾಣದಲ್ಲಿ ಅವರಿಬ್ಬರ ನಡುವೆ ಜಗಳ ಏರ್ಪಟ್ಟಿದೆ. ತನ್ನಲ್ಲಿದ್ದ ಚೂರಿಯಿಂದ ನವೀನ್ ಪೂಜಾರಿಯ ದೇಹದ ಹಲವು ಭಾಗಗಳಿಗೆ ತಿವಿದು ತೀವ್ರತರದಲ್ಲಿ ಗಾಯಗೊಳಿಸಿದ್ದಾನೆ.
ನೋವಿನಿಂದ ಚೀರಾಡುತ್ತಿದ್ದ ನವೀನ್ ಪೂಜಾರಿಯನ್ನು ಘಟನಾ ಸ್ಥಳದಲ್ಲಿ ಇದ್ದ ವ್ಯಕ್ತಿ ( ಆರೋಪಿ ಬಸ್ ಚಾಲಕ ಪರೀಕ್ಷಿತ್ ಗೌಡನೊಂದಿಗೆ ಇದ್ದ ಬಸ್ ನಿರ್ವಾಹಕ ಶೃತೀಶ್ ಅಲಿಯಾಸ್ ಪ್ರಮೋದ್ ) ಗಾಯಳುವನ್ನು ಗಾಯಾಳುವಿನ ದ್ವಿಚಕ್ರವಾಹನದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ತೀವ್ರ ರಕ್ತ ಸ್ರಾವಕ್ಕೊಳಗಾದ ನವೀನ್ ಪೂಜಾರಿ ಕುಂಟಲ್ಪಾಡಿ ತಲುಪುತ್ತಿದ್ದಂತೆ ದ್ವಿಚಕ್ರ ವಾಹನದಿಂದ ಕುಸಿದು ಬಿದ್ದು ಪ್ರಾಣತೆತ್ತಿದ್ದಾರೆ. ಇದರಿಂದ ಭಯಬೀತ ನಾದ ಬಸ್ ನಿರ್ವಾಹಕ ಶೃತೀಶ್ ಅಲಿಯಾಸ್ ಪ್ರಮೋದ್ ) ಮೃತದೇಹವನ್ನು ಅಲ್ಲಿಯೇ ಬಿಟ್ಟು ಕಾಲ್ಗಿತ್ತಿದ್ದಾನೆ.
ಬಸ್ ಚಾಲಕ ಮೂಲತಃ ಮಂಗಳೂರಿನ ಪಡೀಲ್ನವರಾಗಿರುವ ನವೀನ್ ಪೂಜಾರಿ, ಬಾಲಾಜಿ ಆರ್ಕೇಡ್ನಲ್ಲಿ ವಾಸವಾಗಿದ್ದರು. ಈ ಹಿಂದೆ ಬಸ್ ಚಾಲಕರಾಗಿದ್ದ ಅವರು ಬಳಿಕ ಲಾರಿಯ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದನು. ಇತ್ತೀಚೆಗೆ ಬದಲಿಯಾಗಿ ಮಾತ್ರ ಚಾಲಕರಾಗಿ ಹೋಗುತ್ತಿದ್ದರು. ಈ ನಡುವೆ ಬಡ್ಡಿ ವ್ಯವಹಾರವನ್ನು ನಡೆಸಿಕೊಂಡಿದ್ದರು. ನವೀನ್ ಅವರ ಪತ್ನಿ ಮತ್ತು ಮಕ್ಕಳು ಮಂಗಳೂರಿನಲ್ಲಿ ನೆಲೆಸಿದ್ದು, ನವೀನ್ ಮಾತ್ರ ಕಾರ್ಕಳದಲ್ಲೇ ವಾಸವಾಗಿದ್ದರು.
ಪರೀಕ್ಷಿತ್ ಗೌಡ ತನ್ನ ಪತ್ನಿಯಿಂದ ಬೇರ್ಪಟ್ಟು ಕಾರ್ಕಳದ ದೂಪದಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಮೃತ ನವೀನ್ ಪೂಜಾರಿ ಕೂಡ ಪತ್ನಿ ಮತ್ತು ಮಕ್ಕಳಿಂದ ಬೇರ್ಪಟ್ಟ ನಂತರ ಒಂಟಿಯಾಗಿ ವಾಸಿಸುತ್ತಿದ್ದ. ಪರೀಕ್ಷಿತ್ ಗೌಡನಿಗೆ ಪರಿಚಿತಳಾಗಿದ್ದ ಮಹಿಳೆಯೊಂದಿಗೆ ನವೀನ್ ಪೂಜಾರಿ ನಿಕಟ ಸಂಬಂಧ ಬೆಳೆಸಿಕೊಂಡಿದ್ದ ಪರೀಕ್ಷಿತ್ ಗೌಡನಿಗೆ ಇದು ಇಷ್ಟವಾಗದ ಕಾರಣ ನವೀನ್ ಹತ್ಯೆಗೆ ಕಾರಣವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಉಡುಪಿ ಎಸ್ಪಿ ಹರಿರಾಂ ಶಂಕರ್, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ. ಹರ್ಷಪ್ರಿಯಾವದ, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ನಗರ ಠಾಣೆ ಎಸ್ಐ ಮುರಳೀಧರ್ ನಾಯ್ ಗ್ರಾಮಾಂತರ ಠಾಣೆ ಎಸ್ಐ ಪ್ರಸನ್ನ ಎಂ.ಎಸ್., ಸೋಕೊ ತಂಡ, ಬೆರಳಚ್ಚು ತಂಡ ಹಾಗೂ ಶ್ವಾನ ದಳ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.






































