ಕಾರ್ಕಳ : ಕನ್ನಡ ಮಾಧ್ಯಮದಲ್ಲಿ ಕಾರ್ತಿಕ ಪ್ರಥಮ

Picture of RB NEWS

RB NEWS

Bureau Report

ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕಾರ್ತಿಕ ಕಾರ್ಕಳ ತಾಲೂಕಿಗೆ ಪ್ರಥಮ

ಕಾರ್ಕಳ : 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕಾರ್ತಿಕ 616 ಅಂಕ ಪಡೆದು ರಾಜ್ಯಕ್ಕೆ 10ನೇಸ್ಥಾನ ಪಡೆಯುದರೊಂದಿಗೆ ಕನ್ನಡ ಮಾಧ್ಯಮ ವಿಭಾಗದಲ್ಲಿ ಕಾರ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡದಿರುತ್ತಾನೆ.

ಅದೇ ರೀತಿ ಸಂಸ್ಥೆಯ ಪ್ರಾಪ್ತಿ 614 ಅಂಕ ಸ್ನೇಹ 606 ಅಂಕ ಶ್ರೀನಿಧಿ 600 ಅಂಕ ಪಡೆದಿರುತ್ತಾರೆ. 13 ವಿದ್ಯಾರ್ಥಿಗಳು ವಿಶಿಷ್ಟಶ್ರೇಣಿಯಲ್ಲಿ ಪಾಸಾಗಿರುತ್ತಾರೆ ಪರೀಕ್ಷೆಗೆ ಕುಳಿತ 86 ವಿದ್ಯಾರ್ಥಿಗಳಲ್ಲಿ 82 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 95.34 ಫಲಿತಾಂಶ ಬಂದಿರುತ್ತದೆ .

ವಿದ್ಯಾರ್ಥಿಗಳ ಈ ಸಾಧನೆಗೆ ಅಧ್ಯಕ್ಷರು ಸರ್ವ ಸದಸ್ಯರು ಶಾಲಾಭಿವೃದ್ದಿಸಮತಿ, ಹಳೆ ವಿದ್ಯಾರ್ಥಿಗಳು, ಪೋಷಕರು ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top