ಕಾರ್ಕಳ ಈದು ನಕ್ಸಲ್ ಎನ್ಕೌಂಟರ್ಗೆ 21 ವರ್ಷ…!
ಸ್ಪಂದಿಸದ ಸರಕಾರ, ಅಧಿಕಾರಿಗಳ ಹುಸಿಯಾದ ಭರವಸೆ, ಜನಪ್ರತಿನಿಧಿಗಳ ಆಶ್ವಾಸನೆ
ಕುಗ್ರಾಮವಾಗಿ ಉಳಿದಿರುವ ಈದು ಗ್ರಾಮದ ಬೊಲ್ಲೊಟ್ಟು

ಕಾರ್ಕಳ : ಪಶ್ವಿಮಘಟ್ಟದ ತಪ್ಪಲು ತೀರಾ ಪ್ರದೇಶವಾಗಿರುವ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟು ಕೈದಾರೆ ಮನೆ ದಿ.ರಾಮಪ್ಪ ಪೂಜಾರಿಯವರ ಮನೆಯಲ್ಲಿ ಪೊಲೀಸರು ನಡೆಸಿದ್ದರು ಎನ್ಕೌಂಟರ್. ನಕ್ಸಲ್ ಹಣೆಪಟ್ಟಿ ಹೊತ್ತುಕೊಂಡಿದ್ದ ಹಾಜಿಮಾ ಹಾಗೂ ಪಾರ್ವತಿಯ ನೆತ್ತರು ಹರಿದಿತ್ತು. ಯಶೋಧಾ ಜೀವನ್ಮರಣ ಸ್ಥಿತಿಯಲ್ಲಿ ಬದುಕಿ ಉಳಿದಿದ್ದಳು. ಜೊತೆಗಿದ್ದವರು ಓಡಿ ಪರಾರಿಯಾಗಿದದ್ದರು. ಈ ಘಟನೆಯೂ ರಾಜ್ಯ,ರಾಷ್ಟçಮಟ್ಟದಲ್ಲಿ ಸಂಚಲನ ಉಂಟು ಮಾಡಿತ್ತು. 2004 ನವಂಬರ್ 17ರಂದು ನಡೆದಿದ್ದ ಈ ಘಟನೆಗೆ ಇಂದು ಬರೋಬರಿ 21 ವರ್ಷ ಸಂದಿದೆ.

ಯಶೋಧಾ
2003ರಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸಿದ ನಕ್ಸಲ್ ಎನ್ಕೌಂಟರ್ ನಡೆದ ಮನೆಯಿದು. ಅಂದು ನಸುಕಿನ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಹೆಣ್ಣು ಮಕ್ಕಳಿಬ್ಬರು ಹತರಾಗಿದ್ದರು. ಪರಿಣಾಮ ಗುಂಡಿನ ದಾಳಿಗೆ ಮಣ್ಣಿನ ಮನೆಯ ಗೋಡೆಗಳು ಸಂಪೂರ್ಣ ಛಿದ್ರಗೊಂಡಿತ್ತು. ಮನೆಯೊಳಗೆ ರಕ್ತದ ಕೋಡಿ ಹರಿದಿತ್ತು. ಭಯದ ವಾತಾವರಣದಲ್ಲಿ ಈ ಮನೆಯು ವಾಸಕ್ಕೆ ಅಯೋಗ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ, ಸರಕಾರದಿಂದಲೇ ಹೊಸ ಮನೆ ನಿರ್ಮಿಸಿಕೊಡುವ ಭರವಸೆಯು ಮೊಳಗಿತ್ತು. ಆದರೆ ಇದಾವುದು ಕೂಡಾ ಈವರೆಗೆ ಕೈಗೂಡಲಿಲ್ಲ. ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟು ಕೈದಾರೆ ಮನೆ ದಿ.ರಾಮಪ್ಪ ಪೂಜಾರಿಯವರ ಮನೆಯವರ ಗೋಳು.
ಅಂದಿನ ದಿನ ಪಶ್ಚಿಮಘಟ್ಟದ ತಪ್ಪಲಿನ ಜನತೆ ಭಯಪಡುವ ಅವಶ್ಯಕತೆಯಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿ ಧೈರ್ಯ ತುಂಬಲಾಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪೊಲೀಸ್ ತಂಡವೇ ಆ ಮನೆಯ ಸುತ್ತ-ಮುತ್ತ ನೆರೆದಿತ್ತು. ತುಂಬಿದ ಸಮಸ್ತ ಜನೋಸ್ತಮದ ನಡುವೆ ಬಂದಿರುವ ಆಶ್ವಾಸನೆಗಳು ಒಂದಲ್ಲ, ಎರಡಲ್ಲ…ಸಾಲು… ಸಾಲು. ಆದರೆ ಇಂದಿಗೂ ಆ ಮನೆಗೆ ಬಿಡಿಕಾಸು ಸಿಕ್ಕಿಲ್ಲ.
ಇದು ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟು ಕೈದಾರೆ ಮನೆ ದಿ.ರಾಮಪ್ಪ ಪೂಜಾರಿಯವರ ಮನೆಯವರ ಗೋಳು. 2003ರಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸಿದ ನಕ್ಸಲ್ ಎನ್ಕೌಂಟರ್ ನಡೆದ ಮನೆಯಿದು. ಅಂದು ನಸುಕಿನ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಹತರಾಗಿದ್ದರು. ಪರಿಣಾಮ ಗುಂಡಿನ ದಾಳಿಗೆ ಮಣ್ಣಿನ ಮನೆಯ ಗೋಡೆಗಳು ಸಂಪೂರ್ಣ ಛಿದ್ರಗೊಂಡಿತ್ತು. ಮನೆಯೊಳಗೆ ರಕ್ತದ ಕೋಡಿ ಹರಿದಿತ್ತು. ಭಯದ ವಾತಾವರಣದಲ್ಲಿ ಈ ಮನೆಯು ವಾಸಕ್ಕೆ ಅಯೋಗ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ, ಸರಕಾರದಿಂದಲೇ ಹೊಸ ಮನೆ ನಿರ್ಮಿಸಿಕೊಡುವ ಭರವಸೆಯು ಮೊಳಗಿತ್ತು. ಆದರೆ ಇದಾವುದು ಕೂಡಾ ಈವರೆಗೆ ಕೈಗೂಡಲಿಲ್ಲ.

ಗ್ರಾಮ ದೈವದ ಭಂಡಾರದ ಗುಡಿ…
”””””””””””””””””””””””””””””””””””””””””””””””’
ಅಂದು 2003 ನ.17:


ಅಂದು ಪಶ್ಚಿಮಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಆರಂಭವಾದ ದಿನಗಳು ಅದು. ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ದವಾಗಿ ಈ ಚಳುವಳಿ ಹುಟ್ಟಿಕೊಂಡಿದೆ ಎನ್ನುವುದನ್ನು ತಿಳಿಯದಂತಹ ಮುಗ್ದ ಸಮಾಜ ಆ ಭಾಗದಲ್ಲಿತ್ತು. ಕೈಯಲ್ಲಿ ಬಂದೂಕು ಹಿಡಿದುಕೊಂಡು ಅರಣ್ಯದಿಂದ ಒಕ್ಕಲೆಬ್ಬಿಸುವಿಕೆಗೆ ವಿರೋಧ ವ್ಯಕ್ತಪಡಿಸುತ್ತಾ, ಅಮಾಯಕ ಜನತೆಯ ಬೆಂಬಲ ಪಡೆಯಲು ನಕ್ಸಲ್ ತಂಡ ಪ್ರಯತ್ನಿಸಿತ್ತು. ಅದೇ ವೇಳೆ ಕಾರ್ಕಳ ತಾಲೂಕಿನ ಬೊಲ್ಲೊಟ್ಟು ರಾಮಪ್ಪ ಪೂಜಾರಿ ಅವರ ಮನೆಯಲ್ಲಿ ರಾತ್ರಿ ತಂಗಿದ್ದ ಐವರು ಶಂಕಿತ ನಕ್ಸಲ್ ತಂಡದ ಮೇಲೆ ಗುಂಡಿನ ದಾಳಿ ನಡೆದಿತ್ತು. ಹಾಜಿಮಾ ಮತ್ತು ಪಾರ್ವತಿ ಎಂಬ ಇಬ್ಬರು ಯುವತಿಯರು ಎನ್ಕೌಂಟರ್ನಿoದ ಪ್ರಾಣ ಕಳೆದುಕೊಂಡಿದ್ದರೆ, ಓರ್ವಳ ಬಂಧನವಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದರು. ಈ ಪ್ರಕರಣದಿಂದಾಗಿ ಪಶ್ಚಿಮಘಟ್ಟದಲ್ಲಿ ನಕ್ಸಲರ ಗುರುತು ದೃಢಪಟ್ಟಿತ್ತು. ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ನಿAದಾಗಿ ಈದು ಗ್ರಾಮದ ಬೊಲ್ಲೊಟ್ಟು ರಾಷ್ಟçಮಟ್ಟದಲ್ಲಿ ಸುದ್ದಿಯಾಗಿತ್ತು.
ಪರಿಹಾರದ ಭರವಸೆ ಈಡೇರಿಲ್ಲ :
ರಾಮಪ್ಪ ಪೂಜಾರಿಯವರು ಕೃಷಿಕರು. ತನಗರಿವಿಲ್ಲದಂತೆ ನಡೆದುಹೋದ ಘಟನೆಯ ಬಗ್ಗೆ ತೀವೃ ಮರುಕಪಟ್ಟಿದ್ದರು. ಅಂದು ಅವರಿಗೆ ಆತ್ಮಧೈರ್ಯ ತುಂಬುವ ಕೆಲಸವೂ ಆಗಿತ್ತು. ಅದನ್ನೇ ಆ ಕುಟುಂಬ ಬಲವಾಗಿ ನಂಬಿತ್ತು. ಆದರೆ ರಾಮಪ್ಪ ಪೂಜಾರಿ ಅವರಿಗೆ ತನ್ನ ಜೀವಿತಾವಧಿಯಲ್ಲಿಯೇ ದೊರೆತ ಭರವಸೆಯು ಈಡೇರುವ ಕನಸು ಕಮರಿಹೋಗಿತ್ತು. ಆದರೂ ಹೊಸ ಆತ್ಮವಿಶ್ವಾಸದ ಜತೆಗೆ ಮನೆ ನಿರ್ಮಾಣಕ್ಕೆ ಆ ಕುಟುಂಬ ಮುಂದಾಯಿತು. ಒಂದಷ್ಟು ಸಾಲವೂ ಮಾಡಿಕೊಂಡಿತ್ತು. ಆದರೆ ಇಂದು ಸಾಲದ ಕಂತು ಪಾವತಿಸಲಾಗದೆ ಚಡಪಡಿಸುತ್ತಿದ್ದರೂ, ಕೊಟ್ಟ ಭರವಸೆಗೆ ಸ್ಪಂದಿಸದ ಸರಕಾರ ಹಾಗೂ ಇಲಾಖೆ ತೆಪ್ಪಗೆ ಕುಳಿತಿದೆ. ಮುಂದಿನ ದಿನಗಳಲ್ಲಿ ಇವರಿಂದ ಆ ಕುಟುಂಬ ಏನನ್ನು ನಿರೀಕ್ಷಿಸಬಹುವುದು ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಆದರೂ ರಾಮಪ್ಪ ಪೂಜಾರಿ ಅವರ ಪುತ್ರ ಪ್ರಶಾಂತ್ ಸಾಲ್ಯಾನ್ ಅವರು ಇಂದಿಗೂ ಇಲಾಖೆಯಿಂದ ಇಲಾಖೆಗೆ ಅಲೆಯುತ್ತಿದ್ದಾರೆ. ಕೊಟ್ಟ ಭರವಸೆಯಂತೆ ಪರಿಹಾರಧನ ಸಿಗಬಹುವುದು ಎನ್ನುವ ನಿರೀಕ್ಷೆ ಅವರನ್ನು ಇನ್ನೂ ಬಿಟ್ಟಿಲ್ಲ.
ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ
ಹೊಸ ಮನೆ ನಿರ್ಮಾಣಕ್ಕೆ ರಾಷ್ಟ್ರೀಕೃತ ಬ್ಯಾಂಕಿನಿಂದ 9 ಲಕ್ಷ ರೂ. ಸಾಲ ಪಡೆಯಲಾಗಿದೆ. ಪ್ರಸ್ತುತ ಕಂತು ಪಾವತಿಸದ ಕಾರಣ, ಮೇಲಿಂದ ಮೇಲೆ ಮರು ಪಾವತಿ ನೋಟೀಸ್ ಬರುತ್ತಿದೆ. ಈ ಬಗ್ಗೆ 2024ರ ಸೆ.20ರಂದು ಉಡುಪಿ ಪೊಲೀಸ್ ಅಧೀಕ್ಷಕರಿಗೆ ಹಿಂದೆ ದೊರೆತ ಭರವಸೆಯ ಬಗ್ಗೆ ದೂರು ಅರ್ಜಿ ಸಲ್ಲಿಸಿದ್ದು, ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎನ್ನುವ ಭರವಸೆ ಮಾತ್ರ ಅಧಿಕಾರಿಗಳಿಂದ ದೊರೆತಿದೆ. ಆದರೆ ಈವರೆಗೆ ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ.
ಬೇಡಿಕೆಗಳು ಈಡೇರಿಲ್ಲ

ಸುವರ್ಣ ಮತ್ತು ಪಾಲ್ಗುಣಿ ಹೊಳೆ ಹರಿಯುತ್ತಿದೆ. ಅತ್ತಾ..ಇತ್ತಾ ತಲಾ 50 ಮನೆಗಳಿವೆ. ಆದರೆ ಮಳೆಗಾಲದಲ್ಲಿ ಸಂಪರ್ಕವನ್ನು ಕಳೆದುಕೊಳ್ಳಲಾಗುತ್ತದೆ. ಕಾರಣ ಅಲ್ಲಿ ಇಂದಿಗೂ ಸೇತುವೆಯ ಭಾಗ್ಯವನ್ನೇ ಕರುಣಿಸಲಾಗಲಿಲ್ಲ. ಒಂದೆಡೆ..ಇನ್ನೊoದೆಡೆಗೆ ಸಂಪರ್ಕ ಸಾಧಿಸಲು ಸುಮಾರು ಏಳು ಕಿ.ಲೋ.ಮೀಟರ್ ಸುತ್ತುವರೆದು ಸಾಗಬೇಕು. ಒಂದೆಡೆ ಅಂಗನವಾಡಿಯಿದೆ. ಇನ್ನೊಂದು ಭಾಗದ ಮಕ್ಕಳು ಹೊಳೆ ದಾಟಿಕೊಂಡು ಆ ಅಂಗನವಾಡಿಗೆ ಹೋಗುವಂತಿಲ್ಲ. ಬಾಣಂತಿಯರಿಗೂ ಪೌಷ್ಠಿಕ ಆಹಾರ ತರಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಅನಾರೋಗ್ಯ ಪೀಡಿತರಾದರೆ, ಸುತ್ತುವರೆದು ಸಾಗುವ ದುಃಸ್ಥಿತಿ. ಹೊಳೆ ದಾಟಲಾಗದೆ, ಅಲ್ಲಿನ ನಿವಾಸಿಗಳು ಪಡುವ ಸಂಕಷ್ಟ ಹೇಳತೀರದ್ದಾಗಿದೆ. ಹೊಳೆಯ ಆತ್ತಾ ಭಾಗವೂ ಕಾರ್ಕಳ ತಾಲೂಕಿಗೆ ಸೇರಿದ್ದರಿಂದ ಸುತ್ತುವರೆದು ಸಂಪರ್ಕ ಸಾಧಿಸುವ ಅನಿವಾರ್ಯತೆ ಅಲ್ಲಿನ ಜನತೆಯದ್ದು. ಜತೆಗೆ ರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿದ್ದು, ಅಲ್ಲಿರುವ ಮನೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿಯೇ ಉಳಿದುಬಿಟ್ಟಿದೆ. ಮಳೆಗಾಲದಲ್ಲಿ ಬೊಲ್ಲೊಟ್ಟು ಪರಿಸರ ಅಕ್ಷರಶಃ ದ್ವೀಪವಾಗುತ್ತದೆ.
ಶಾಶ್ವತ ಕುಗ್ರಾಮ
ನಮ್ಮನ್ನಾಳುವ ಸರಕಾರಗಳು ಯಾವ ರೀತಿ ನಡೆದುಕೊಂಡಿದೆ ? ಎನ್ನುವುದಕ್ಕೆ ಈದು ಗ್ರಾಮದ ಬೊಲ್ಲೊಟ್ಟು ಪರಿಸರ ಜ್ವಲಂತ ಉದಾಹರಣೆ. ಪ್ರಸ್ತುತ ಅಲ್ಲಿನ ಜನತೆ ಸರಕಾರದ ಮೇಲಿನ ಭರವಸೆಗಳನ್ನು ಕಳೆದುಕೊಂಡಿದ್ದಾರೆ. ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅಲ್ಲಿನ ಸಮಸ್ಯೆಗಳು ಉಲ್ಬಣವಾಗುತ್ತಿದ್ದು, ನಕ್ಸಲ್ ಹೆಸರಿನಡಿ ಬಂದ ನಕ್ಸಲ್ ಪ್ಯಾಕೇಜ್ಗಳು ಕೂಡಾ ಸಮರ್ಪಕವಾಗಿ ತಲುಪದಿರುವುದು ಆ ಭಾಗದ ಜನತೆಯ ದೌರ್ಭಾಗ್ಯವೇ ಸರಿ.
ನ್ಯಾಯ ಕೊಡುವರ್ಯಾರು ?
ಅಧಿಕಾರಿಗಳು, ಸರಕಾರ ಮತ್ತು ಜನಪ್ರತಿನಿಧಿಗಳ ಭರವಸೆಯು ಈವರೆಗೆ ಈಡೇರಲಿಲ್ಲ. ಮನೆ ನಿರ್ಮಾಣಕ್ಕೆ ಲಕ್ಷಾಂತರ ರೂ. ಸಾಲ ಮಾಡಿದ್ದೇವೆ. ಇಂದಿಗೂ ಭರವಸೆಯನ್ನು ಕಳೆದುಕೊಳ್ಳದೆ ಇಲಾಖೆಯಿಂದ ಇಲಾಖೆಗೆ ಅಲೆದಾಡುತ್ತಿದ್ದೇವೆ. ಆರಂಭದಲ್ಲಿ ನನ್ನ ತಂದೆಯವರು ಬಾರೀ ಪ್ರಯತ್ನ ಮಾಡಿದ್ದರು. ಅವರು ಕಳೆದ ಏಳು ವರ್ಷದ ಹಿಂದೆ ಮೃತಪಟ್ಟಿದ್ದು, ಬಳಿಕದ ದಿನಗಳಿಂದ ನನ್ನ ಪ್ರಯತ್ನ ಮುಂದುವರೆದಿದೆ. ಈ ಬಗ್ಗೆ ಕಳೆದ 21 ವರ್ಷಗಳಿಂದ ನಮ್ಮ ಕುಟುಂಬದ ಹೋರಾಟ ಮುಂದುವರೆದಿದ್ದು, ನಮಗೆ ನ್ಯಾಯ ಕೊಡುವರ್ಯಾರು ? ಎನ್ನುವುದು ನನ್ನ ಪ್ರಶ್ನೆ
:- ಪ್ರಶಾಂತ್ ಸಾಲ್ಯಾನ್, ಬೊಲ್ಯೊಟ್ಟು.
(ದಿ.ರಾಮಪ್ಪ ಪುಜಾರಿಯವರ ಪುತ್ರ)
ಸ್ಪಂದಿಸುವ ಕೆಲಸವಾಗಬೇಕು
ಅತಂತ್ರ ಸ್ಥಿತಿಯಲ್ಲಿರುವ ಜನರ ಬಳಿಗೆ ಸರಕಾರ ಹಾಗೂ ಅಧಿಕಾರಿಗಳು ಬಂದು ಬೆನ್ನು ತಟ್ಟಿ ಹೋಗಿರುವ ಕೆಲಸ ಮಾಡಿದೆ ಬಿಟ್ಟರೆ, ಅವರ ಸಂಕಷ್ಟಕ್ಕೆಗೆ ಶಾಶ್ವತವಾಗಿ ಸ್ಪಂದಿಸುವ ಕೆಲಸ ಮಾಡಿಲ್ಲ. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಕೊಟ್ಟ ಭರವಸೆಗಳನ್ನು ಕಾರ್ಯಗತಗೊಳಿಸುವ ಪ್ರಯತ್ನ ನಡೆಸಿದ್ದಲ್ಲಿ, ಜನತೆಯ ಆತ್ಮಧೈರ್ಯ ಹೆಚ್ಚಿಸುವ ಕೆಲಸವಾಗಬಹುವುದು. ಜತೆಗೆ ಇಲಾಖೆಯ ಜತೆ ವಿಶ್ವಾಸದಿಂದ ವ್ಯವಹರಿಸಲು ಸಹಾಯವಾಗುತ್ತದೆ.
:- ಶ್ರೀಧರ ಗೌಡ, ಈದು
(ಅಧ್ಯಕ್ಷರು, ರಾಜ್ಯ ಮಲೆಕುಡಿಯ ಸಂಘ)
ಮತ್ತೆ ನಕ್ಸಲ್ ಸದ್ದು :

ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿ ಮತ್ತೆ ನಕ್ಸಲ್ ಸದ್ದು ಮಾಡಿದೆ. ಈಗಾಗಲೇ ಆ ಭಾಗದಲ್ಲಿ ನಕ್ಸಲ್ ಓಡಾಟ ಸ್ಥಳೀಯರು ಹಾಗೂ ಇಲಾಖೆಯ ನಿದ್ದೆಗೆಡಿಸಿದೆ. ನಕ್ಸಲ್ ಮತ್ತು ಪೊಲೀಸರ ಓಡಾಟದ ನಡುವೆ ಭರವಸೆ ಕಳೆದುಕೊಂಡ ಸ್ಥಳೀಯರ ಬದುಕು ಬಾರೀ ಆತಂಕಕ್ಕೊಳಗಾಗಿದೆ.































