ಕಾರ್ಕಳ: ಅವಮಾನವೀಯ ಕೃತ್ಯವನ್ನು ಮುಸ್ಲಿಂ ಸಮಾಜ ಒಪ್ಪುವುದಿಲ್ಲ -ಶೇಕ್ ಶಬ್ಬೀರ್
ಕಾರ್ಕಳ : ಅಯ್ಯಪ್ಪ ನಗರದ ಯುವತಿಯ ಮೇಲೆ ನಡೆದ ಸರಣಿ ಅತ್ಯಾಚಾರ ಇಡೀ ಸಮಾಜ ತಲೆತಗ್ಗಿಸುವಂತದಾಗಿದೆ. ಆರೋಪಿ ಯಾವ ಧರ್ಮಕ್ಕೆ ಸೇರಿದ್ದಾನೆ ಎಂಬುದು ಇದರಲ್ಲಿ ಮುಖ್ಯವಲ್ಲ. ಇಂತಹ ಪೇಚಾಚಿಕ ಕೃತ್ಯಕ್ಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮುಸ್ಲಿಂ ಮುಖಂಡ ಮಿಯ್ಯಾರು ಶೇಕ್ ಶಬ್ಬೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಅಲ್ತಾಫ್ ನನ್ನು ಬಂಧಿಸಿದ ಪೊಲೀಸರ ಕ್ರಮವು ಶ್ಲಾಘನೀಯವಾಗಿದೆ. ಇನ್ನುಳಿದ ಆರೋಪಿಗಳನ್ನು ಅತಿ ಶೀಘ್ರವಾಗಿ ಬಂಧಿಸಿ ಆರೋಪಿಗಳನ್ನು ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆ ಕೊಡಿಸುವಲ್ಲಿ ಮುಂದಾಗಬೇಕು.
ಇಂತಹ ಕೃತ್ಯಗಳಿಗೆ ನಮ್ಮ ಬೆಂಬಲ ಖಂಡಿತ ಇಲ್ಲ. ಘಟನೆಯನ್ನು ಖಂಡಿಸುತ್ತೇವೆ. ಪೋಲಿಸ್ ಇಲಾಖೆಯ ಮೇಲೆ ನಂಬಿಕೆ ಇಟ್ಟು ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.














