ಕಾರ್ಕಳ ಅತ್ತೂರು ಸಂತ ಲೋರೆನ್ಸ್ ಪುಣ್ಯಕ್ಷೇತ್ರ ಬಸಿಲಿಕ ವಾರ್ಷಿಕ ಮಹೋತ್ಸವ -2025 ಜನವರಿ 26 ರಿಂದ 30

Picture of RB NEWS

RB NEWS

Bureau Report

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವ -೨೦೨೫ ಜನವರಿ ೨೬ರಿಂದ ೩೦ರ ವರೆಗೆ ಜಗಲಿರುವುದು.
“ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” ಎಂಬುವುದು ಮಹೋತ್ಸವದ ವಿಷಯವಾಗಿದೆ.


ಜನವರಿ 26 ರ ಬೆಳಿಗ್ಗೆ 10.30 ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನಡೆಯಲಿದೆ. ಉಡುಪಿ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ.
ಜನವರಿ 27ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ಜರಗಲಿದ್ದು, ಉಡುಪಿ ಶೇಷ್ಠ ಧರ್ಮಗುರು ಅ.ವಂ.ಫರ್ಡಿನಾಡ್ ಗೋನ್ಸಾಲ್ವಿಸ್ ನೆರವೇರಿಸಲಿದ್ದಾರೆ.
ಜನವರಿ 28 ರಂದು ಸಾಯಂಕಾಲ 5.30 ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಲಿದೆ. ಬೆಳ್ತಂಗಡಿ ಧರ್ಮಾಧ್ಯಕ್ಷ ಪರಮಪೂಜ್ಯ ಲೋರೆನ್ಸ್ ಮುಕ್ಕುಝೀ ನೆರವೇರಿಸಲಿದ್ದಾರೆ.
ಜನವರಿ 29 ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಲಿದೆ. ಮಂಗಳೂರು ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅಲೋಶಿಯಸ್ ಪಾವ್ಲ್ ಸೊಜ್ ನೆರವೇರಿಸಲಿದ್ದಾರೆ.
ಜನವರಿ 30 ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಲಿದೆ. ಬಾರುಯಿಪುರ್ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಸಾಲ್ವದೊರ್ ಲೋಬೋ ನೆರವೇರಿಸಲಿದ್ದಾರೆ,

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top