









ಕಾರ್ಕಳ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ 43ನೇ ವರ್ಷದ ವಾರ್ಷಿಕೋತ್ಸವ
ಕಾರ್ಕಳ : ಕಾರ್ಕಳ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ 43ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಮಂಜುನಾಥ ಪೈ ಸಭಾಭವನದಲ್ಲಿ ನೆರವೇರಿಸಲಾಯಿತು.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗನವಾಡಿ ಕಾರ್ಯಕರ್ತ ಸಹಾಯಕಿಯರ ಸಂಘದ ಅಧ್ಯಕ್ಷೆ ಪದ್ಮಾವತಿ ಅಮೀನ್ ವಹಿಸಿದ್ದಾರೆ. ಕಾರ್ಕಳ ತಾಲೂಕಿನ ತಾಲೂಕು ವೈದ್ಯಾಧಿಕಾರಿಯಾದ ಡಾ. ಸಂದೀಪ್ ಕುಡ್ವ ಪ್ರಶಂಶೆ ವ್ಯಕ್ತಪಡಿಸಿದರು. ತಾಲೂಕು ಪಂಚಾಯತ್ ಮ್ಯಾನೇಜರ್ ಹರೀಶ್ ಶುಭ ಹಾರೈಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯನಾರಾಯಣ ನಾಯಕ್ ಕಾರ್ಯಕ್ರಮವನ್ನು ಹಾಗೂ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರನ್ನು ಉದ್ದೇಶಿಸಿ ಅಂಗನವಾಡಿ ಕಾರ್ಯಕರ್ತರು ಸಹಾಯಕಿಯರು ಮಾಡುತ್ತಿರುವ ಕೆಲಸವು ಬಹಳ ಗಂಭೀರವಾಗಿರುವ ಸೇವೆಯಾಗಿರುತ್ತದೆ. ಈ ಸೇವೆಯನ್ನು ನಿಷ್ಠೆಯಿಂದ ಮುಂದುವರಿಸುವಂತೆ ಅಶಿಸಿದರು.
ನಿವೃತ್ತ ಮೇಲ್ವಿಚಾರಕಿ ಸುಮಿತ್ರಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಹಿರಿಯ ಮೇಲ್ವಿಚಾರಕಿ ರತಿ, ಮೇಲ್ವಿಚಾರಕಿರಾದ ವಸಂತಿ, ಉಮಾ, ಶಾಂಭವಿ, ಗುಣವತಿ, ವಿನೋದ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಕೆ. ಪಿ ಪದ್ಮಾವತಿ ಕಾರ್ಯಕ್ ಶುಭ ಹಾರೈಸಿದರು.
ಇದೇ ವೇಳೆಯಲ್ಲಿ ನಿವೃತ್ತಗೊಂಡ ಸೌಭಾಗ್ಯ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಸಂಘದ 15 ವರ್ಷಗಳಿಂದ ಅಧ್ಯಕ್ಷ ಸ್ಥಾನದಲ್ಲಿದ್ದು ಅಂಗನವಾಡಿ ಕಾರ್ಯಕರ್ತ ಸಾಹಯಕಿಯರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದು ಈಗ ಅಂಗನವಾಡಿ ಹುದ್ದೆಗೆ ಸ್ವಯಂ ನಿವೃತ್ತಿ ಗೊಳ್ಳುತ್ತಿರುವ ಪದ್ಮಾವತಿ ಅಮೀನ್ ಇವರನ್ನು ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳೊಂದಿಗೆ ಬೀಳ್ಕೊಡುವ ಸಮಾರಂಭವನ್ನು ನೆರವೇರಿಸಿ ಸನ್ಮಾನಿಸಿದರು.
ಜಿಲ್ಲಾ ಪ್ರಶಸ್ತಿ ವಿಜೇತೆ ಶಶಿಕಲಾ ಸಚ್ಚರಿಪೇಟೆ ಇವರನ್ನು ಸನ್ಮಾನಿಸಲಾಯಿತು.
7ನೇ ತರಗತಿಯಲ್ಲಿ ಓದುತ್ತಿರುವ 41 ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯಲ್ಲಿ ಓದುತ್ತಿರುವ 44 ವಿದ್ಯಾರ್ಥಿಗಳಿಗೆ ಪಿಯುಸಿಯಲ್ಲಿ ಓದುತ್ತಿರುವ 26 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಸೌಮ್ಯ ಮಿಯ್ಯಾರು ಇವರ ಮಕ್ಕಳಿಗೆ ನಮ್ಮ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು. 17 ಮಂದಿ ಕಾರ್ಯಕರ್ತೆ ಸಹಾಯಕಿಯರಿಗೆ ಆರೋಗ್ಯ ನಿಧಿ ಪರಿಹಾರ ನೀಡಲಾಯಿತು. ನಿವೃತ್ತಿಗೊಂಡಂತ ಒಂಬತ್ತು ಕಾರ್ಯಕರ್ತರಿಗೆ ಹಾಗೂ 11 ಸಹಾಯಕರಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ವಸಂತಿ ಕಾಡಂಬಳ ಪ್ರಾರ್ಥನೆಗೈದರು. ಸಂಘದ ಉಪಾಧ್ಯಕ್ಷೆ ಸ್ವಾಗತಿಸಿದರು. ಮಮತಾ ಪ್ರಾಸ್ತಾವಿಕ ಮಾತನಾಡಿದರು. ಪದ್ಮಾವತಿ ಅಮೀನ್ ಧನ್ಯವಾದವಿತ್ತರು. ವನಿತಾ ಕಾರ್ಯಕ್ರಮದ ನಿರೂಪಿದರು. ಸಾಕಮ್ಮ ಹಾಗೂ ಯಶ ನೆರವೇರಿಸಿದರು.
ಸುಶೀಲಾ, ಪ್ರಮೀಳಾ, ಸವಿತಾ, ಶಕುಂತಲಾ ರಾವ್, ಪ್ರೇಮಾ, ಮಲ್ಲಿಕಾ, ಮಂಜುಳಾ, ಶ್ರೀಲತಾ, ವಲಯದ ಪದಾಧಿಕಾರಿಗಳು ಬೈಲೂರು ವಲಯದ ಪ್ರೀತಿ ಟೀಮ್ ಇವರು ನೃತ್ಯದ ಮೂಲಕ ಮನರಂಜಿಸಿದರು.





































