ಕಾರ್ಕಳದ ಸಾಲ್ಮರದಲ್ಲಿ ನಾಗರಿಕರ ಅನುಕೂಲಕ್ಕಾಗಿ ತಲೆಯೆತ್ತಿ ನಿಂತಿದೆ ಫಾರ್ಚೂನ್ ಆರ್ಚಿಡ್ ಎಂಬ ವಾಣಿಜ್ಯ ಹಾಗೂ ವಸತಿ ಸಂಕೀರ್ಣ ಕಟ್ಟಡ

Picture of RB NEWS

RB NEWS

Bureau Report

ಕಾರ್ಕಳಕ್ಕೆ ಅಂಥದ್ದಾದ ಒಂದು ಸೌಲಭ್ಯ ಇದುವೇ ಪ್ರಥಮದ್ದಾಗಿದೆ ಎನ್ನಬಹುದು. ಪ್ರವಾಸೋದ್ಯಮದಲ್ಲಿ ,ಶಿಕ್ಷಣ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಕಾರ್ಕಳವು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಜನರನ್ನು ಅತೀ ಹೆಚ್ಚು ಸಂಖ್ಯೆಗಳಲ್ಲಿ ಬರಮಾಡಿಕೊಳ್ಳುತ್ತಿದೆ.

ಫಾರ್ಚೂನ್ ಆರ್ಚಿಡ್ ಕಟ್ಟಡದಲ್ಲಿ ವ್ಯಾಪಾರ ಮಳಿಗೆಗಳಿಗಾಗಿ 48ಸ್ಥಳಾವಕಾಶವನ್ನು ನಿರ್ಮಿಸಿಕೊಂಡಿದ್ದು 30 ರಷ್ಟು ವಸತಿ ಗೃಹಗಳನ್ನು ಹೊಂದಿರುವುದು ವಿಶೇಷ ಆಕರ್ಷಣೆಯಾಗಿದೆ.
ಕಟ್ಟಡ ವಿನ್ಯಾಸದಲ್ಲಿ ಅತ್ಯಾಕರ್ಷಕ ವಿನ್ಯಾಸ ಮಾಡಿಕೊಂಡಿರುವುದಲ್ಲದೆ ನಿರ್ಮಾಣದಲ್ಲಿಯೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡ ಹೆಗ್ಗಳಿಕೆ ಈ ವಾಣಿಜ್ಯ ಕಟ್ಟಡದ್ದಾಗಿರುತ್ತದೆ.
ವಸತಿ ಗೃಹದ ಶೈಲಿಯಲ್ಲೂ ವಾಸ್ತುವನ್ನು ಬಳಸಿಕೊಳ್ಳಲಾಗಿದ್ದು ವಿಶೇಷವಾದ ಒಳನೋಟವನ್ನು ತುಂಬಿಕೊಂಡಿರುವಂತಿದೆ. ಧನಾತ್ಮಕ ಯೋಚನೆಗಳೇ ತುಂಬಿಸಬಲ್ಲ ಅದ್ಭುತ ವಾತಾವರಣದ ಸಮುಚ್ಚಯವಾಗಿರುತ್ತದೆ.
ವಸತಿ ಸಮುಚ್ಚಯದವರು ಸಭೆ, ಸಮಾರಂಭ ನಡೆಸುವ ಸದ್ದುದ್ದೇಶದಿಂದ ವಿಶಾಲವಾದ ರೂಪ್ ಟಾಪ್ ವ್ಯವಸ್ಥೆ, ಭದ್ರತೆಯ ನಿಟ್ಟಿನಲ್ಲಿ ಸಿಸಿ ಕ್ಯಾಮರ ಅಳವಡಿಕೆ. ದೈಹಿಕ ಸದೃಢತೆ ಹೆಚ್ಚಿಸಿಕೊಳ್ಳಲು ಜಿಮ್ ರೂಮ್, ಸ್ವಯಂ ಚಾಲಿತವಾದ ಎರಡು ಲಿಫ್ಟ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.‌

ನಿವಾಸಿಗಳಿಗೆ ವ್ಯಾಯಾಮ ,ಕ್ರೀಡೆಗಳಿಗೋಸ್ಕರ ಸವಲತ್ತುಸೌಲಭ್ಯಗಳನ್ನು ಕಟ್ಟಡದಲ್ಲಿ ಅಳವಡಿಸಲಾಗಿದ್ದು ಸ್ವತಂತ್ರ ಮನೆಯ ಅನುಭವ ಹುಟ್ಚಿಕೊಳ್ಳುವ ಹೊಸರೂಪ ,ಹೊಸ ವಿನ್ಯಾಸ ನಿರ್ಮಾಣವಾಗಿದೆ.
ಫಾರ್ಚೂನ್ ಆರ್ಚಿಡ್ ಕಾರ್ಕಳ ಉಡುಪಿ ರಸ್ತೆಯ ಸಾಲ್ಮರದಲ್ಲಿ ತಲೆಯೆತ್ತಿ ನಿಂತಿದ್ದು ನಾಗರಿಕರನ್ನು ಆಕರ್ಷಿಸುತ್ತಿದೆ.
ಮಹೇಂದ್ರ ವರ್ಮ ಜೈನ್,ಅಬುಲಾಲ್ ಪುತ್ತಿಗೆ,ರೋನಿ ಫೆರ್ನಾಂಡಿಸ್ ,ಡೆನ್ನಿಸ್ ಪಿರೈರಾ ನಾಲ್ವರನ್ನೊಳಗೊಂಡ ಫಾರ್ಚೂನ್ ಪ್ರಮೋಟರ್ಸ್ ನ ನಿರ್ಮಾಣವಾಗಿದೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top