ಕಾರ್ಕಳದ ಡಾ. ಮಾಲತಿ ಪೈ ಅವರಿಗೆ ರಾಜ್ಯಮಟ್ಟದ ಯೋಗಾಂಜಲಿ ಪ್ರಶಸ್ತಿ
RB NEWS
Bureau Report
ಕಾರ್ಕಳದ ಡಾ. ಮಾಲತಿ ಅವರಿಗೆ ರಾಜ್ಯಮಟ್ಟದ ಯೋಗಾಂಜಲಿ ಪ್ರಶಸ್ತಿ
ಕಲುಬುರಗಿ : ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ(ರಿ) ಕಲಬುರಗಿ ರಾಜ್ಯ ಘಟಕವು ರಾಜ್ಯದಾದ್ಯಂತ ಪ್ರತಿಭೆಯನ್ನು ಗುರುತಿಸಿ, ಕಾರ್ಕಳದ ಡಾ. ಮಾಲತಿ ಪೈ ಅವರಿಗೆ ರಾಜ್ಯಮಟ್ಟದ ಯೋಗಾಂಜಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಆದರ್ಶ ವಿದ್ಯಾಧಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.
ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಅವರ 195ನೇ ಜನ್ಮದಿನೋತ್ಸವ ಪ್ರಯುಕ್ತ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಘಟಕ ಉದ್ಘಾಟನಾ ಸಮಾರಂಭ ಮತ್ತು ಕ್ಯಾಲೆಂಡರ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪಅವರಿಗೆ ತ್ರಿವಿಧ ದಾಸೋಹ ಶ್ರೀ ಪ್ರಶಸ್ತಿ, ಡಾ.ಶ್ರದ್ಧಾನಂದ ಸ್ವಾಮೀಜಿಗೆ ಜ್ಞಾನಶ್ರೀ ಪ್ರಶಸ್ತಿ ಸೇರಿದಂತೆ 16 ಜನರಿಗೆ ವಿಶೇಷ ಪ್ರಶಸ್ತಿ ಮತ್ತು 47 ಜನರಿಗೆ ಕರ್ನಾಟಕ ರಾಜ್ಯ ಮಟ್ಟದ ಆದರ್ಶ ಉಪಾಧ್ಯಾಯರುಗಳ ಪ್ರಶಸ್ತಿ ಹಾಗೂ 43 ಜನರಿಗೆ ಜಿಲ್ಲಾಮಟ್ಟದ ಆದರ್ಶ ವಿದ್ಯಾಧಾತ್ರಿ ಪ್ರಶಸ್ತಿ ನೀಡಲಾಗಿದೆ.